Saturday, August 15, 2009
ವಿದೇಶ
ವಿದೇಶ= Foreign = ಪರದೇಶ
ದೇಶ ಸುತ್ತಿ ನೋಡು, ಕೋಶ ಓದಿ ನೋಡು ಅನ್ನೋ ಒಂದು ಗಾದೆ ಮಾತು ಇದೆ. ಅಂದ್ರೆ ಪ್ರಪಂಚ ಸುತ್ತಿ ನೋಡಿ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಇವೆ ಎಂದು ಕೇಳಿರುತ್ತೇವೆ. ಅಷ್ಟಲ್ಲದೆ, ಎಲ್ಲೂ ಹೋಗದೆ ಇರುವವರಿಗೆ ಬಾವಿಯಲ್ಲಿರುವ ಕಪ್ಪೆ ಅನ್ನೋ ಮಾತು ಸಹ ಕೇಳಿರುತ್ತೀವಿ.
ಪೀಠಿಕೆ ಜಾಸ್ತಿ ಆಯಿತು ಅಲ್ವಾ? ವಿಷಯಕ್ಕೆ ಬರ್ತೀನಿ.
ಈ ಕಾಲದಲ್ಲಿ, ಅದೂ ಈ IT/BT ಯುಗದಲ್ಲಿ ಹೆಚ್ಚು ಕಡಿಮೆ ಎಲ್ಲರ ಮನೇಲೂ ಯಾರೋ ಒಬ್ರು ವಿದೇಶದಲ್ಲಿ ಇರ್ತಾರೆ ಇಲ್ಲ ಹೋಗಿ ಬಂದಿರ್ತಾರೆ.
ಇವರಲ್ಲಿ ನಾವು ಸುಮಾರು ರೀತಿಯ ಜನರನ್ನು ನೋಡಬಹುದು ( keeping in mind the middle class people)
೧. ಓದಿಗಾಗಿ ವಿದೇಶಕ್ಕೆ ಹೋಗುವವರು:-
ಡಿಗ್ರಿ ಓದುವಾಗಲೇ, TOFEL, GRE ಮುಂತಾದ ಪರೀಕ್ಷೆಗಳಿಗೆ ತಯಾರಾಗಿ ಅಮೇರಿಕಾದ ಯಾವುದಾದರು ಒಂದು ವಿಶ್ವವಿಧ್ಯಾನಿಲಯದಲ್ಲಿ ಸ್ಕಾಲರ್ಶಿಪ್ ಸೀಟ್ ಸಿಕ್ಕಿದರೆ ಆಯಿತು. ಜನ್ಮ ಸಾರ್ಥಕ. ಸಾಲಸೋಲ ಮಾಡಿ ಹೇಗೋ ಅಲ್ಲಿ ಹೋಗಿ ಸೇರುವುದು. ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ಹೇಗೋ ಓದು ಮುಗಿಸುತ್ತಾರೆ. ಇನ್ನು ಓದಿದ ಮೇಲೆ, ಕೆಲಸದ ಅನುಭವ ಸಹ ಅಲ್ಲೇ ಆಗಬೇಕು. ಏನಿಲ್ಲದಿದ್ದರೂ, ಓದಿಗಾಗಿ ಮಾಡಿದ ಸಾಲವನ್ನಾದರೂ ತೀರಿಸಲು, ಅಲ್ಲಿ ಕೆಲಸ ಮಾಡಲೇ ಬೇಕು.
ಹೀಗೆ ಅದು ಮುಂದ್ವರಿತಾ ಹೋಗುತ್ತೆ. ಮೊದಲು ೧ -೨ ವರ್ಷಕ್ಕೆ ಹೋದವರು, ಎರಡು ನಾಲ್ಕಾಗುತ್ತೆ, ನಾಲ್ಕು ಎಂಟು ಆಗುತ್ತೆ. ಮತ್ತೆ ಮದುವೆ, ಹೆಂಡತಿ, ಮಗು, ಹೀಗೆ ಬೆಳಿತಾ ಹೋಗುತ್ತೆ. ಆದ್ರೆ ವಾಪಾಸ್ ಮಾತ್ರ ಬರಲ್ಲ.
೨. ಕೆಲಸ ಮೇಲೆ ವಿದೇಶಕ್ಕೆ ಹೋಗುವವರು:-
long term or short term assignments ಅಂತ ಹೋಗ್ತಾರೆ. ಇಲ್ಲಿಂದ ಒಂದು ಕಂಪನಿ ಮುಖಾಂತರ ಹೋಗಿ ಎಷ್ತಗುತ್ತೋ ಅದ್ದು ದುಡ್ಡು ಉಳಿಸಿ ಮತ್ತೆ ವಾಪಾಸ್ ಬರಬೇಕು ಅಂತಾನೋ ಇಲ್ಲ ಅಲ್ಲಿ ಬೇರೆ ಕೆಲಸ ಹುಡುಕಿ ಗ್ರೀನ್ಕಾರ್ಡ್ ಸಿಕ್ಕಿ ಅಲ್ಲೇ ಇರೋ ಯೋಚನೆ ಮಾಡೋರೆ ಜಾಸ್ತಿ. ಇಂತಹವರು, ಬರೋ dollars/pounds ಹೇಗೆ ಉಳಿಸಬೇಕು ಅಂತ ಯೋಚನೆ ಮಾಡಿ ಮಾಡಿ, ಊಟ ತಿಂಡಿ ಎಲ್ಲ ಕಡಿಮೆ ಮಾಡ್ತಾರೆ. ಪೈಸ ಪೈಸ ಲೆಕ್ಕ ಹಾಕಿ ಉಳಿಸುತ್ತಾರೆ. ಎಷ್ಟು ವರ್ಷಗಳು ಇದ್ರೂ ಸಹ, ಇದೆ ಜೀವನ, ಮಕ್ಕಳು ಮರಿ ಎಲ್ಲ ಅದರೂ ಸಹ ಉಳಿತಾಯ ಮುಖ್ಯ. ಉದ್ದೇಶ ಏನು ಅಂದ್ರೆ, ಮತ್ತೆ ಕೆಲವು ವರ್ಷಗಳ ನಂತರ ಭಾರತಕ್ಕೆ ಬಂದು ಇರೋದು. ಆದ್ರೆ ಅಷ್ಟರಲ್ಲಿ ಎಷ್ಟು ಆಗುತ್ತೋ ಅಷ್ಟು ದುಡ್ಡು ಉಳಿಸಿ ಇಲ್ಲಿ ಬಂದು ದಿಲ್ದಾರ ಆಗಿ ಬದುಕೋ ಅಸೆ. ಇವರುಗಳು, ವಿದೇಶಿಗಳು ಅಲ್ಲದೆ, ಸ್ವದೆಷಿಗಳು ಅಲ್ಲದೆ ತ್ರಿಶಂಕುವಿನಂತಹವರು.
೩. ಪ್ರಪಂಚ ಸುತ್ತಿ ಸಂತೋಷ ಪಡೋರು: -
ಇವರು ಕೆಲಸದ ಮೇಲೆ ಅಥವಾ ಓದಕ್ಕೆ ಹೋದರು ಸಹ, ಸಂತೋಷವಾಗಿ ಎಲ್ಲಿ ಹೇಗೆ ಇರಬೇಕು ಹಾಗೆ ಇದ್ದು ಸಂತೋಷವಾಗಿ ಇರ್ತಾರೆ. ಸಂತೋಷವಾಗಿ ನಮ್ಮ ದೇಶಕ್ಕೆ ವಾಪಸ್ಸು ಸಹ ಬರ್ತಾರೆ.
ಇನ್ನು ಹಲವು ಬಗೆಯ ಜನರಿರಬಹುದು. ಆದ್ರೆ ಜನ ಒಂದು ವಿಷಯ ಮರಿತಾರೆ. ನಮ್ಮ ಬೇರು ಇರೋದು ಈ ದೇಶದಲ್ಲೇ. ವಿದೇಶಕ್ಕೆ ಹೋದ ಹೊಸತರಲ್ಲಿ ಎಲ್ಲ ಚೆನ್ನಾಗಿರುತ್ತೆ. ಹೊಸ ಜಾಗ, ಹೊಸ ಸಂಸ್ಕೃತಿ, ಹೊಸ ವಿಷಯಗಳು. ಕೆಲವು ದಿನಗಳು ಕಳೆದಂತೆ ಬೇಸರ ಬರುತ್ತೆ. ಗೊತ್ತಿಲ್ಲದ ಜನ, ನಮ್ಮ ಭಾಷೆ ಎಲ್ಲೂ ಸಹ ಕೇಳಸಿಗುವುದಿಲ್ಲ.ನಾವು ಅವರ ಸಂಸ್ಕೃತಿಗೆ ವಗ್ಗಿಹೊಗುತ್ತೀವಿ. ಅಲ್ಲಿ ಬರೀ ನಾವು ಇರುತ್ತೀವಿ. ಅಮ್ಮ, ಅಪ್ಪ, ನೆಂಟರು ಇಷ್ಟರು, ಗೆಳೆಯರು ಎಲ್ಲರು ಇರೋದು ಎಲ್ಲರು ಭಾರತದಲ್ಲಿ. ಹಬ್ಬ ಹರಿದಿನ ಯಾವುದಕ್ಕೂ ಯಾರು ಜೊತೆಗೆ ಇರೋದಿಲ್ಲ.
ಅಮ್ಮ ಅಪ್ಪ ನಮ್ಮ ದಾರಿ ಕಾಯ್ಕೊಂಡು ಇರ್ತಾರೆ. ಏನರ ಹೆಚ್ಚು ಕಡಿಮೆ ಅದ್ರು ನಾವು ಮಕ್ಕಳು ಜೊತೆಗೆ ಇರೋದಿಲ್ಲ.
ಯಾವುದು ಸರಿ ಯಾವುದು ತಪ್ಪು ಅಂತ ಹೇಳೋದು ಕಷ್ಟ. ಎಲ್ಲಾನು ಮುಖ್ಯಾನೆ. ಹಣ, ಕೆಲಸ, ಪ್ರವಾಸ, independent life, personal ಲೈಫ್ ಎಲ್ಲ ಬೇಕು. ಹಾಗೆ ಅಮ್ಮ ಅಪ್ಪಂಗೆ ಸಹ ಪ್ರಾಮುಖ್ಯತೆ ಕೊಡಬೇಕು. ಅವರ ಬೇಕು ಬೇಡಗಳನ್ನ ಗಮನಿಸಬೇಕು. ಎಲ್ಲದರ ಮಧ್ಯೆ ಒಂದು balance maintain ಮಾಡಬೇಕು.
Subscribe to:
Post Comments (Atom)
No comments:
Post a Comment