Wednesday, January 2, 2008

ಬದುಕು

ಸಿಕ್ಕಿರುವೆ ನಾನು ಈ ಬದುಕಿನಾ ಸುಳಿಯಲ್ಲಿ
ಹಿಂದಿರುಗಿ ಹೋಗಲಾರೆ, ಮುಂದಡಿ ಇಡಲಾರೆ.
ಬಯಸಿದ್ದನ್ನು ಆಗಗೊಡದ ಈ ನನ್ನ ಬದುಕು
ಬೇಡದ್ದನ್ನು ಆಗಿಸುತ್ತಿದೆ ಪ್ರತಿದಿನವು.

ನಿರ್ಮಲವಾದ ಪ್ರೀತಿಯನ್ನು ಹುಡುಕಿ ಹೊರಟರೆ ನಾನು
ಮೂರ್ಖತೆಯ ತುತ್ತತುದಿಯನ್ನೇರುವೆನೇನೊ
ಬದುಕಿನ ನೆಮ್ಮದಿಯು ಎಲ್ಲೆಂದು ಹುಡುಕಹೊರಟರೆ ನಾನು
ಬಹುಶಃ ಕಾಣಸಿಗಬಹುದೇನೋ ಸಾವಿನ ಕರಿ ನೆರಳಿನಲ್ಲಿ.

ಸಾಧನೆಯ ಹಾದಿಯನು ಹುಡುಕುತಾ ಹೋದರೆ ನಾನು
ದಾರಿಯೇನೋ ಸಿಗುವುದು, ಆದರೆ ಒಂಟಿಯಾಗಿ ಸಾಗಲಾರೆನೇನೊ
ನಂಬುವುದು ಯಾರನ್ನು? ಪ್ರೀತಿಸುವುದು ಯಾರನ್ನು?
ಯಾರಿಗಾಗಿ ಬದುಕುವುದು ಎಂದು ಊಹಿಸಲಾರೆನು ನಾನು.

ಮನದ ಮೂಲೆಯಲ್ಲಿ ಏನೋ ನಿರೀಕ್ಷೆ, ಏನೋ ಕಾತರ
ಒಮ್ಮೆಯಾದರೂ ಕತ್ತಲು ಹೋಗಿ ಬೆಳಕು ಮೂಡಬಹುದೇನೋ ಎಂದು.
ಒಳ್ಳೆಯದರ ನಿರೀಕ್ಷೆಯಲ್ಲಿಯೇ ಮುಳುಗುವೆನು ಈ ಜೀವನ ಸುಳಿಯಲ್ಲಿ
ಮುಳುಗದೆ ದಡಸೇರಬಹುದೆಂಬ ನಿರೀಕ್ಷೆಯಲ್ಲಿ.

ಈ ಆಸೆಯೇ ಬದುಕುವುದಕ್ಕೆ ಮೂಲ
ಬದುಕಲಾಗದಿದ್ದರೂ ಬದುಕಿಸುವುದು ಈ ಆಸೆಯ ಸಣ್ಣ ಚಿಗುರು.
ಜೀವನವೆಲ್ಲಾ ಹುಡುಕಾಟವೇ, ಹೋರಾಟವೇ
ಏತಕ್ಕಾಗಿ ಎಂದು ಅರಿಯದ ಹುಡುಕಾಟ, ಹೋರಾಟ

No comments: