ಈ ಲೇಖನವನ್ನು ಬರಿಯೋದಕ್ಕೆ ಪ್ರೇರಣೆ ಇತ್ತೆಚೆಗಷ್ಟೇ ಆದ ನನ್ನ ಮಾವನ ಮಗಳ ಮದುವೆ.
ಮದುವೆ ಅಂದ್ರೆ ಒಂದು ಪವಿತ್ರ ಬಂಧ. ಗುರುಹಿರಿಯರು ಹಾಗು ಬಂದುಮಿತ್ರರರ ಸಮಕ್ಷಮದಲ್ಲಿ ನೆರೆವೇರಬೇಕು. ಆದರೆ ಅದಕ್ಕಾಗಿ ಹಣವನ್ನು ದುಂಡು ವ್ಯಥ್ಯ ಮಾಡುವುದು ತಪ್ಪಲ್ಲವೇ.
ಈ ಮದುವೆಯ ಖರ್ಚು ನೋಡಿದ್ರೆ ಭಯ ಆಗುತ್ತೆ. ಏನಿಲ್ಲ ಅಂದ್ರೂ ೮ - ೧೦ ಲಕ್ಷಗಳು ಖರ್ಚು ಆಗಿದೆ. ದೊಡ್ಡ ಛತ್ರ - ಅದಕ್ಕೇ ೧ ಲಕ್ಷ. ಇನ್ನು ಮದುವೆಗೆ ಸುಮಾರು ೨೦೦೦ ಜನ. ೩ ದಿನ ಮದುವೆ. ಹುಡುಗಿಗೆ ಒಂದು ಹತ್ತು ಕಂಚಿ ಸೀರೆಗಳು ಜೊತೆಗೆ ಒಂದು ೨೫ - ೩೦ ಬೇರೆ ಸೀರೆಗಳು ಜೊತೆ ಅದೆಷ್ಟೋ ಒಡವೆಗಳು. ಇದು ಹೋಗ್ಲಿ ಬಿಡಿ, ಮದುವೆಗೆ ಮಾಡಿಸಿದ ಅಡುಗೆಗಳನ್ನ ನೋಡಿದ್ರೆ ತಲೆ ಸುತ್ತು ಬರುತ್ತೆ... ಅಂದ್ರೆ ಅಷ್ಟು ಬಗೆಬಗೆಯ ಭಕ್ಶ್ಯಗಳು ಇದ್ವು. ಹೆಚ್ಚುಕಡಿಮೆ ಎಲ್ಲರು ಇಷ್ಟ ಪಡೋ ಅಂತಹ ತಿಂಡಿಗಳು. ಏನಿಲ್ಲ ಅಂದ್ರೆ ಒಂದು ಐದು ಬಗೆಯ ಸಿಹಿತಿಂಡಿಗಳೇ ಇದ್ವು. ಜನರು ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ತಿನ್ನ ಬೇಕು, ಅದ್ರೆ ಹಾಗೆ ಆಗಲ್ಲ. ದುರಾಸೆ ಜಾಸ್ತಿ... ಎಲ್ಲ ಹಾಕಿಸಿಕೊಳ್ಳುತ್ತಾರೆ ಆದ್ರೆ ಎಲ್ಲ ಚೆಲ್ಲುತ್ತಾರೆ. ತಪ್ಪು ಅಲ್ವಾ.... ಎಷ್ಟೋ ಜನಕ್ಕೆ ತಿನ್ನಕ್ಕೆ ಒಂದು ಹೊತ್ತಿನ ಊಟ ಸಹ ಇರಲ್ಲ. ಇದನ್ನ ಯಾರು ಯೋಚನೇನೆ ಮಾಡಲ್ಲ. ಹಾಕಿಸಿಕೊಂಡ ಅನ್ನ ಚೆಲ್ಲೋದೆ ಒಂದು ಫ್ಯಾಶನ್ ಆಗಿಹೋಗಿದೆ. ಇದಷ್ಟೇ ಅಲ್ಲ. ಮದುವೆಗೆ ಬಂದೊರಿಗೆಲ್ಲ ಉಡುಗೊರೆಗಳು - ಒಂದು ಪ್ಲಾಸ್ಟಿಕ್ ಡಬ್ಬಿ ಅದು ಸುಮಾರು ೫೦ ರುಪಾಯಿ ಬೆಲೆಯದ್ದು. ಜೊತೆಗೆ ಹತ್ತಿರದ ಬಂಧುಬಳಗದವರಿಗೆ ಬೇರೆ ಬಗೆಯ ಉಡುಗೊರೆಗಳು - ಸೀರೆ, ಶರ್ಟ್-ಪ್ಯಾಂಟ್ ಪೀಸ್ ಗಳು. ಮತ್ತೆ ಹೂವಿನ ಅಲಂಕಾರಕ್ಕೆ ಸುಮಾರು ದುಡ್ಡು ಖರ್ಚು ಆಗಿತ್ತು.
ಇದು ಬರೀ ನನ್ನ ಮಾವನ ಮಗಳ ಮದುವೆಯ ಕಥೆ ಅಲ್ಲ. ಈ ನಡುವೆ ಎಲ್ಲ ಮದುವೆಗಳು ಹೀಗೆ ಆಗ್ತಾ ಇರೋದು. ಅಂದ್ರೆ ಮಿಡ್ಲ್ ಕ್ಲಾಸ್ ಜನರ ಮದುವೆ. ಇನ್ನು celebrities ಮತ್ತೆ politicians ಮದುವೆಗಳನ್ನ ನೋಡಿಬಿಟ್ರೇ ಅಷ್ಟೆ. ಹಣವನ್ನು ನೀರಿಂತೆ ಖರ್ಚು ಮಾಡ್ತಾರೆ. ಕೋಟಿಗಳ ಲೆಕ್ಕನೆ ಸಿಗಲ್ಲ.
ಇಷ್ಟೊಂದು ಖರ್ಚಿನ ಅಗತ್ಯ ಇದ್ಯ ನಮಗೆ? ಅದೇ ದುಡ್ದನ್ನ ಹುಡುಗಿಯ ಹೆಸರಿನಲ್ಲಿ ಡೆಪಾಸಿಟ್ ಮಾಡಿದಿದ್ರೆ ಕಷ್ಟಕಾಲಕ್ಕೆ ಉಪಯೋಗಕ್ಕೆ ಬಂದಿರೋದು. ಅಥವಾ ಅನಾಥ ಮಕ್ಕಳಿಗೋ ಇಲ್ಲ ಬಡಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಬಹುದಾಗಿತ್ತು ಅಲ್ವಾ.
ಮದುವೆನ ಒಂದು ದೇವಸ್ಥಾನದಲ್ಲಿ ಮಾಡಿಕೊಂಡು ರಿಜಿಸ್ಟರ್ ಮಾಡಿಸಿದರೆ ಸಾಲದೆ? ಮುಖ್ಯ ಗಂಡು ಹೆಣ್ಣು ಸಂತೋಷವಾಗಿ ಸಂಸಾರ ಮಾಡೋದು ಅದಕ್ಕಾಗಿ ಇಷ್ಟೆಲ್ಲಾ ಖರ್ಚು ಮಾಡೋ ಅಗತ್ಯನೇ ಇಲ್ಲ. ದೊಡ್ದು ಇರೋರು ಏನು ಖರ್ಚು ಮಾಡಬಹುದು ಆದ್ರೆ ಇಲ್ಲದೆ ಇರೋರು ಏನು ಮಾಡಕ್ಕೆ ಆಗುತ್ತೆ? ದೊಡ್ದು ಇರೋರು ಮಾಡೋ ಆಡಂಬರದಿಂದಾಗಿ ದುಡ್ಡು ಇಲ್ಲದವರಿಗೆ ಕಷ್ಟ. ಇದನ್ನ ಯೋಚನೆ ಮಾಡಬೇಕು ಜನರು.
Wednesday, January 2, 2008
Subscribe to:
Post Comments (Atom)
1 comment:
ಮದುವೆ ಅಂದರೆ ಎರಡು ಮನಸುಗಳ, ಕುಟುಂಬಗಳ ಮಿಲನ. ಇದು ಸರಳವಾಗಿದ್ದಷ್ಟು ಬಂಧನ ಮತ್ತಷ್ಟು ಸುಮಧುರವಾಗಿರುತ್ತದೆ. ನಿಜಕ್ಕೂ ಇಲ್ಲಿ ಆಡಂಬರದ ಅವಶ್ಯಕತೆ ಇಲ್ಲ. ಉತ್ತಮ ಲೇಖನ.
Post a Comment