Wednesday, January 2, 2008

ಕಂಗಳು

ಹೃದಯ ಮಾತು ಹೇಳಿತು ಕಂಗಳು
ಕೇಳಿದೆಯಾ ಗೆಳೆಯ?
ಪ್ರೀತಿಯ ಭಾಷೆ ಆಡಿತು ಕಂಗಳು
ಆಲಿಸಿದೆಯಾ ಗೆಳೆಯ?
ಹೃದಯದಿ ನಿನ್ನ ಚಿತ್ರವ ಬರೆಯಿತು
ನೋಡಿದೆಯಾ ಗೆಳೆಯ?
ಸುಂದರ ಲೋಕವ ಸೃಷ್ಟಿಸಿ ನಲಿಯಿತು
ನಿನ್ನೊಂದಿಗೆ ಗೆಳೆಯ.

ನನ್ನನು ಸೆಳೆಯಿತು ನಿನ್ನಯ ಕಂಗಳು
ಅರಿತಿರುವೆಯಾ ಗೆಳೆಯ?
ನಿನ್ನನು ಸೆಳೆಯಿತು ನನ್ನಯ ಕಂಗಳು
ನಿಜವಲ್ಲವೆ ಗೆಳೆಯ?
ನಿನ್ನಯ ಒಲವಿನ ಆಸರೆ ಬಯಸಿತು
ನೀಡುವೆಯಾ ಗೆಳೆಯ?
ಜೀವನ ಪೂರ್ತಿಯ ಜೊತೆಯನು ಬಯಸಿತು
ನಿನ್ನೊಂದಿಗೆ ಗೆಳೆಯ.

No comments: