ಗಿಡಮರಗಳ ನೆರಳಿಲ್ಲದ ಊರು
ಹೃದಯವೇ ಇಲ್ಲದ ದೇಹದಂತೆ
ಗಿಡಮರಗಳ ಹಸಿರೇ ಜೀವನದ ಉಸಿರು.
ಸಸಿ ನೆಟ್ಟು ನೀರೆರೆದರೆ ಮರವಾಗುವುದು
ಮರಗಳು ಮುದ್ದಾದ ಪಕ್ಷಿಗಳ ವಾಸಸ್ಥಾನವಾಗುವುದು
ಫಲಪುಷ್ಪಗಳನ್ನು ಕೊಡುವ ಮರ, ದಾರಿಹೋಕರಿಗೆ ನೆರಳನ್ನು ಕೊಡುವುದು
ಅಂತಹ ಮರಗಳನ್ನು ಕಡಿಯುತ್ತಿರುವವರು ಹೃದಯಹೀನ ಮನುಷ್ಯರು.
ಉಸಿರಾಡುವ ಗಾಳಿಯನ್ನು ಶುದ್ಧಗೊಳಿಸುತ್ತಿದೆ ಗಿಡಮರಗಳು
ಕಾಲಕಾಲಕ್ಕೆ ಮಳೆಯಾಗಿಸಿ, ಜೀವನವ ಹಸನಾಗಿಸುತ್ತಿದೆ ಗಿಡಮರಗಳು
ಸುಂದರ ಪ್ರಕೃತಿಯ ಆಧಾರವೇ ಗಿಡಮರಗಳು
ಹಸಿರು ವನಗಳಿಲ್ಲದ ಮರಳುಗಾಡುಗಳ ಸೃಷ್ಟಿಯಲ್ಲಿ ತೊಡಗಿದ್ದಾರೆ ಮನುಷ್ಯರು.
ವನಸಿರಿಯು ನಶಿಸಿದರೆ ದುರ್ಬರವಾಗುವುದು ಜನ ಜೀವನ
ಮರಗಿಡಗಳ ಆಶ್ರಯವಿಲ್ಲದೆ ನಶಿಸುವುದು ಪ್ರಾಣಿ ಸಂಕುಲ
ವಿಷಗಾಳಿಯ ಉಸಿರಾಡಿ, ಫಲಪುಷ್ಪ ಆಹಾರವಿಲ್ಲದೆ ಬದುಕುವರೇ ಜನರು?
ಕಾಂಚಾಣದ ದುರಾಸೆಯಿಂದ ವಿನಾಶದೆಡೆಗೆ ಸರಿಯುತ್ತಿದ್ದಾರೆ ಮನುಷ್ಯರು.
ಗಿಡಮರಗಳಿಲ್ಲದ ಜಗವ ಊಹಿಸಲಸಾಧ್ಯ
ಗಿಡಮರಗಳೆ ಜೀವನದ ಆಧಾರ
ಗಿಡಮರಗಳ ಹಸಿರೇ ಜೀವನದ ಉಸಿರು.
Wednesday, January 2, 2008
Subscribe to:
Post Comments (Atom)
No comments:
Post a Comment