ನಾವೆಲ್ಲ ಚಿಕ್ಕೊರು ಇದ್ದಾಗ ಸ್ಕೂಲ್ ರಜ ಬಂತು ಅಂದ್ರೆ ಮೊದಲು ನೆನಪಾಗ್ತಾ ಇದ್ದಿದ್ದು ಅಜ್ಜಿ ಮನೆ. ಅಮ್ಮ ಅಪ್ಪನ್ನ ಕಾಡಿಸೋ ಪೀಡಿಸೋ ಅಜ್ಜಿಮನೆಗೆ ಹೊರಟರೆ ಸಾಕು. ಅದಕ್ಕಿಂತ ಸಂತೋಷ ಇನ್ನೊಂದಿಲ್ಲ.
ಅಜ್ಜಿ ಮನೆ ಒಂದು ತುಂಬಿದ ಕುಟುಂಬ - ೭ ಜನ ಮಾವಂದಿರು ಅತ್ತೆರು, ಅವರ ಮಕ್ಕಳು ಅಜ್ಜ ತಾತ ಎಲ್ಲ ಇರ್ತಿದ್ರು. ಅಲ್ಲಿ ಹೋದ್ರೆ ಅಜ್ಜಿ ತರತರಹದ ತಿಂಡಿಗಳನ್ನ ಮಾಡಿಕೊಡ್ತಾ ಇದ್ರು, ಜೊತೆಗೆ ಆಡಕ್ಕೆ ನನ್ನ ಮಾವನ ಮಕ್ಕಳು. ಇನ್ನೇನು ಬೇಕು ಆಗ......ಬೆಳಗ್ಗಿಂದ ಸಂಜೆ ತನಕ ಬರಿ ಆಟ - ಅದು ಎಷ್ಟು ಬಗೆಯ ಆಟಗಳನ್ನ ಆಡ್ತಾ ಇದ್ವಿ ಆಗ... ಕಲ್ಲು ಮಣ್ಣು, ಮರಕೊತಿ, ಜೂಟಾಟ, ಅಳುಗುಲಿ ಮನೆ, ಚೌಕಾಭಾರ, ಪಗಡೆ, ಚೂರಚೆಂಡು, ಕಣ್ಣ ಮುಚ್ಚಾಲೆ, ಅಮ್ಮ ಅಪ್ಪ ಆಟ, ಟೀಚರ್ ಆಟ ಒಂದಾ ಎರಡ ?? ಬೆಳಿಗ್ಗೆ ಮನೆ ಬಿಟ್ರೆ ಸಂಜೆ ದೀಪ ಹಚ್ಚೋ ಹೊತ್ತಿಗೆ ಮನೆ ಸೇರ್ತ ಇದ್ವಿ. ದಿನವಿಡೀ ಆಟ. ಸಂಜೆ ದೀಪ ಹಚ್ಚೋ ಮುಂಚೆ ಕೈಕಾಲು ಮುಖ ತೊಳೆದು ರೆಡಿ ಆಗ್ತಾ ಇದ್ವಿ. ದೀಪ ಹಚ್ಚಿದ ಮೇಲೆ ಶ್ಲೋಕಗಳನ್ನ ಹೇಳಿಕೊಳ್ತಾ ಇದ್ವಿ. ಅಜ್ಜಿಮನೇಲಿ ನಾವೆಲ್ಲ ಚಿಕ್ಕೊರು ಜಾಸ್ತಿ ಇರ್ತ್ವಿದ್ವಿ ಅಂತ ಯಾರಾನ ಒಬ್ಬ ಅತ್ತೆ ಊಟಕ್ಕೆ ಎಲ್ಲರಿಗು ಕೈತುತ್ತು ಹಾಕೋರು. ಆ ದಿನಗಳು ಇವತ್ತಿಗೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಭಾನುವಾರದಂದು ಅಮ್ಮ ಅಪ್ಪ ಅಥವಾ ಅತ್ತೆ ಮಾವಂದಿರು ನಮ್ಮಣ್ಣ ಎಲ್ಲಿಗಾನ ಕರ್ಕೊಂಡು ಹೋಗೋರು - ಗಾಂಧಿಬಜ್ಯಾರ್, ಜಯನಗರ ಇಲ್ಲ cubbon ಪಾರ್ಕ್, lalbhag, visveshwaraiah museum etc etc.
ಇದು ಬರಿ ಅಜ್ಜಿ ಮನೆಗೆ ಹೋದಾಗ ಅಷ್ಟೆ ಅಲ್ಲ. ನಮ್ಮ ಮನೇಲೇ ಇದ್ರೂ ಹೀಗೆ. ರಜ ಇತ್ತು ಅಂದ್ರೆ ಮನೆನೇ ಸೇರ್ತ ಇರ್ಲಿಲ್ಲ. ಮನೆ ಹತ್ರ ಇದ್ದ ಗೆಳೆಯರ ಜೊತೆ ಆಟ. ಚೆನ್ನಾಗಿರ್ತಾ ಇತ್ತು ಚಿಕ್ಕಂದಿನ ದಿನಗಳು. ಮರುಕಳಿಸದ ಆ ದಿನಗಳು. ಸೊಗಸಾದ ದಿನಗಳು.
ಇಂದಿನ ಮಕ್ಕಳನ್ನ ನೋಡಿದರೆ ಆಶ್ಚರ್ಯ ಆಗುತ್ತೆ. ಹೆಚ್ಚು ಕಡಿಮೆ ಎಲ್ಲ ಒಬ್ಬೊಬ್ರೆ. ಅಂದ್ರೆ ಅಮ್ಮ ಅಪ್ಪಂಗೆ ಒಬ್ನೇ ಮಗನೋ ಇಲ್ಲ ಮಗಳೋ ಆಗಿರ್ತಾರೆ. ಒಂಟಿಯಾಗಿ ಬೆಳೀತಿರ್ತಾರೆ. ಯಾವಾಗಲು ಕಂಪ್ಯೂಟರ್ ಮುಂದೆ ಇಲ್ಲ ವೀಡಿಯೊ ಗೇಮ್ಸ್ ಇಲ್ಲ ಟಿವಿ ನಲ್ಲಿ ಪೋಗೋ, ಕಾರ್ಟೂನ್ ನೆಟ್ವರ್ಕ್ ಅಂಥ channels. ರಜ ಬಂತು ಅದ್ರೆ summer camps. ಮೇಲೆ ಹೇಳಿದ ಯಾವ ಆಟಗಳು ಅವ್ರಿಗೆ ಗೊತ್ತೆ ಇರಲ್ಲ. ಮನೆ ಹತ್ರ ಇರುವವರ ಸಂಪರ್ಕನೆ ಇರಲ್ಲ. ಒಂಟಿ ಅಗಿಹೊಗ್ತಾರೆ, ಆಗಿಹೋಗಿದ್ದಾರೆ.
ಇಷ್ಟೊಂದು ಬದಲಾವಣೆಯ ಅಗತ್ಯ ಇದೆಯ?? ತಪ್ಪು ಯಾರದ್ದು?? ಬದಲಾಗುತ್ತಿರುವ ಕಾಲನಾ? ಅಮ್ಮ ಅಪ್ಪಂದ?? ಇಲ್ಲ ಈ ಹೊಸ ಸಂಸ್ಕೃತಿನ ? ಅರ್ಥ ಆಗ್ತಾ ಇಲ್ಲ
Wednesday, January 2, 2008
Subscribe to:
Post Comments (Atom)
2 comments:
ಇವತ್ತಿನ generation is in trouble. ನಾನು ಕೂಡ ಇವತ್ತಿನ ಮಕ್ಕಳ ಬಗ್ಗೆ ಬರ್ದಿದ್ದೆ.Everybody is in illusion. ಪೋಷಕರಿಗೆ ಮಕ್ಕಳ ಭಾವನೆಗಳನ್ನ ಅರ್ಥ ಮಾದ್ಕೊಳ್ಲೊ ತಾಳ್ಮೆ ಇಲ್ಲ.
ಕಾಲ ಬದಲಾಗಿದೆ, ಹಳೆಯ ಆಟಗಳೆಲ್ಲ ಈಗಿನ ಜನರೇಷನ್ ಮಕ್ಕಳಿಗೆ ಗೊತ್ತೇ ಇಲ್ಲ, ಚನ್ನೆ ಮಣೆ, ಗೋಲಿ ಆಟ, ಬುಗರಿ, ಲಗೋರಿ, ಇನ್ನೂ ಅದೆಷ್ಟು ಆಟಗಳಿವೆ... ಈಗ ಎನಿದ್ರೂ ಕಂಪೂಟರ್ ಗೇಮ್ಸ್, ಚೆಸ್ ಆಡೋಣ ಅಂದರೆ ಕಂಪ್ಯೂಟರ್ ಆನ್ ಮಾಡುವ ಸ್ತಿತಿಗೆ ಬಂದಿದ್ದಾರೆ ಈಗಿನ ಮಕ್ಕಳು, ಕಾಲಾಯೇ ತಸ್ಮಯ್ ನಮ:
Post a Comment