ದಿನ ನಿತ್ಯ ಕನಸಿನಲಿ ಕಂಡೆ ನಾ ನಿನ್ನ
ನನಸಾಗಲಿ ನನ್ನ ಕನಸು ಎಂದು ಪ್ರಾರ್ಥಿಸಿದೆ ದಿನಾ.
ನಿನ್ನೊಡನೆ ವಿಹರಿಸಿದ ಕನಸಿನಾ ಲೋಕವನು
ಜೀವವಿರುವವರೆಗು ಮರೆಯಲಾರೆನು ನಾನು.
ಕನಸಿನಲಿ ಕಂಡ ನಿನ್ನ ಮುಖಾರವಿಂದವ
ನಿಜ ಜೀವನದ ಮುಖಗಳಿಗೆ ಹೋಲಿಸಿದೆ ಚಿನ್ನ,
ಯಾರನ್ನೂ ಹೋಲದು ನಿನ್ನ ಈ ಮುದ್ದು ಮುಖವು
ನನ್ನ ಕನಸುಗಳಿಗೆ ಮಾತ್ರ ಸೀಮಿತವಾಗಿರುವ ನಿನ್ನ ಈ ಮುದ್ದು ಮುಖವು.
ನಿಜವಾಗಿ ನನಗೆ ಕಾಣಿಸಿದರೆ ನೀನು
ಗುರುತಿಸಲು ನಾನು, ಯಾರೆಂದು ಕೇಳುವೆ ನೀನು.
ಬಾಳ ಪೂರ್ತಿಯ ವಿರಹಕ್ಕಿಂತ ಕನಸಿನ ಪ್ರೀತಿಯೇ ಚೆನ್ನ ಗೆಳೆಯ, ಪ್ರೀತಿಯೇ ಚೆನ್ನ
ನಿಜವಾಗದಿದ್ದರೂ ಈ ಮಧುರ ಕನಸುಗಳು ಜೀವನಾಧ್ಯಂತ ನನ್ನ ಜೊತೆಗಿರುವವು
ಆ ಕನಸಿನಲ್ಲಿ ಎಂದಿಗೂ ನೀ ನನ್ನೋಡನಿರುವೆ ಗೆಳೆಯ, ಎಂದೆಂದಿಗೂ.
ದಿನ ನಿತ್ಯ ಕನಸಿನಲಿ ಕಂದೆ ನಾ ನಿನ್ನ
ನನಸಾಗದಿರಲಿ ನನ್ನ ಈ ಕನಸು ಎಂದು ಪ್ರಾರ್ಥಿಸುವೆ ನಾ ದಿನಾ.
Wednesday, January 2, 2008
Subscribe to:
Post Comments (Atom)
No comments:
Post a Comment