ಕನಸುಗಳ ಗೋಪುರವ
ಏರುವ ಸಮಯದಲಿ
ಸುತ್ತಲಿನ ಜನರು
ಕೈಬಿಡಲು ಕಾದಿರಲು
ದೂರ ಸರಿಯುವ
ಸ್ನೇಹಿತರ ಮರೆಯಲಾಗದೆ
ತೊಳಲಾಡುತಿದೆ ಮನವು.
ಕನಸುಗಳ ನನಸಾಗಿಸಲು
ಕಲ್ಲುಮುಳ್ಳುಗಳ ಹಾದಿಯನು
ಕ್ರಮಿಸಬೇಕು, ಜೊತೆಗಾಗಿ
ಕಾಯದೆ, ಏಕಾಂಗಿಯಾಗಿ
ಗುಂಪಿನಿಂದ ದೂರಾಗಿರುವ
ಮುಗ್ಧ ಪಕ್ಷಿಯಂತೆ
ಚಡಪಡಿಸುತಿದೆ ಮನವು.
ಮೋಡ ಮುಸುಕಿದ
ಆಗಸದಿ ಮಿನುಗುತಿದೆ
ನಕ್ಷತ್ರಗಳು, ಹೊಮ್ಮಿಸುತ್ತಿವೆ
ಆಶಾವಾದದ ಬೆಳಕು
ದೂರಾದವರ ಮರೆತು
ಹೊಸಲೋಕವ ಹುಡುಕುತಾ
ಬೆಳಕಿನ ಬೆನ್ನಹತ್ತುತಿದೆ ಮನವು.
Wednesday, January 2, 2008
Subscribe to:
Post Comments (Atom)
No comments:
Post a Comment