Wednesday, July 30, 2008

ಬೊಂಬೆ ಹಬ್ಬ

ನವರಾತ್ರಿ ಬಂತು ಅಂದ್ರೆ ಬೆಂಗಳೂರು - ಮೈಸೂರಿನವರಿಗೆ ಮೊದಲು ಜ್ಞಾಪಕ ಬರುವುದು ಮಹಾರಾಜರ ದಸರಾ ಉತ್ಸವ ಮತ್ತು ಬೊಂಬೆ (ಗೊಂಬೆ) ಹಬ್ಬ.
ನವರಾತ್ರಿ ಹತ್ತು ದಿನಗಳ ಹಬ್ಬ. ಮಹಲಯ ಅಮಾವಾಸ್ಯೆಯಿಂದ ಶುರು ಆಗಿ ವಿಜಯದಶಮಿಯಂದು ಮುಗಿಯುತ್ತದೆ.

ಮಕ್ಕಳಿಗೆ ಆಗ ತಾನೆ ಪರೀಕ್ಷೆಗಳು ಮುಗಿದು ದಸರಾ ರಜೆ ಶುರುವಾಗಿರುತ್ತಿತ್ತು. ನವರಾತ್ರಿ ಶುರು ಆಗುವ ಒಂದು ವಾರದ ಹಿಂದಿಂದಲೂ ಬೊಂಬೆ ಇಡುವ ತಯಾರಿ ಶುರು ಆಗುತ್ತಿತ್ತು. ಮೊದಲು ಅಟ್ಟದಲ್ಲಿ ಜೋಪಾನವಾಗಿ ಇಟ್ಟಿದ್ದ ಬೊಂಬೆಗಳನ್ನು ಹುಷಾರಾಗಿ ತೆಗೆದು ದೂಳೊರೆಸುವುದು. ಹೆಚ್ಹು ಕಡಿಮೆ ಎಲ್ಲಾ ಮಣ್ಣಿನ ಮತ್ತು ಪಿಂಗಾಣಿ ಅಥವಾ ಮರದ ಬೊಂಬೆಗಳೇ ಇರುತ್ತಿತ್ತು. ಹಬ್ಬ ಶುರು ಅಗೋ ೨ -೩ ದಿನಗಳ ಮೊದಲು ಪಾರ್ಕ್ ಮಾಡಲು ಮಣ್ಣು ರೆಡಿಮಾಡಿ, ಜೊತೆಗೆ ಅದರಲ್ಲಿ ಬಗೆಬಗೆಯ ಕಾಳುಗಳನ್ನು ಉದುರಿಸಿ ಪೈರು ಬರುವಂತೆ ನೋಡಿಕೊಳ್ಳುತ್ತಿತ್ತು. ಮನೇಲಿ ಇದ್ದ ಮೇಜುಗಳು + ಹಳೆ ಡಬ್ಬ ಅಥವಾ ಟಿನ್ ಗಳು + ಮರದ ಹಲಗೆಗಳನ್ನು ಜೋಡಿಸಿ ಅದರಮೇಲೆ ಒಂದು ದುಪ್ಪಟಿಯನ್ನು ಹಾಸಿ ಬೊಂಬೆ ಇಡುತ್ತಿದ್ದೆವು. ಅದೆಷ್ಟು ರೀತಿಯ ಬೊಂಬೆಗಳು ಇರುತ್ತಿದ್ದವು. ರಾಮ-ಲಕ್ಷ್ಮಣ ಸೆಟ್, ದಶಾವತಾರ, ಮದುವೆ ಸೆಟ್, ಕೃಷ್ಣ, ಶೆಟ್ಟಮ್ಮ ಶೆಟ್ತಪ್ಪನ ಸೆಟ್, ಪ್ರಾಣಿಗಳು, ಕಪ್ಪೆ ಚಿಪ್ಪಿನವು, ಚೆನ್ನಪಟ್ಟಣದ ಸಾಮಾನುಗಳು, ಸಣ್ಣ ಸಣ್ಣ ಕಾರುಗಳು ಗಾಡಿಗಳು ಅನೇಕಾನೇಕ ಬೊಂಬೆಗಳು.

ಮಹಾಲಯ ಅಮಾವಾಸ್ಯೆ ಅಂದ್ರೆ ನವರಾತ್ರಿಯ ಮೊದಲ ದಿನ ಅಮ್ಮ ಮುಖ್ಯವಾದ ಪಟ್ಟದ ಬೊಂಬೆಗಳನ್ನ ಕಳಶದ ಜೊತೆ ಇತ್ತು ಪೂಜೆ ಮಾಡುವರು. ದಿನ ಸಂಜೆ ನಾವೆಲ್ಲ ಮಕ್ಕಳು, ಅಂದ್ರೆ ಹೆಚ್ಚು ಕಡಿಮೆ ನಮ್ಮ ಬೀದಿಯ ಮಕ್ಕಳೆಲ್ಲ ...ಎಲ್ಲರ ಮನೆಗೆ ಹೋಗಿ ಬೊಂಬೆನೋಡಿಕೊಂಡು ಬರ್ತಾ ಇದ್ವಿ. ತರತರಹದ ಬೊಂಬೆಗಳು ಮತ್ತು ಪ್ರತಿ ಮನೆಯಲ್ಲೂ ಕೊಡುತಿದ್ದ ಬೊಂಬೆ ಬಾಗನ (ಚರುಪು) ತುಂಬ ಚೆನ್ನಾಗಿರುತ್ತಿತ್ತು. ಹತ್ತು ದಿನಗಳು ತರತರಹದ ತಿಂಡಿಗಳು. ಸಂಭ್ರಮದ ದಿನಗಳು ಅವು.

ಈಗಲೂ ನಮ್ಮ ಮನೆ ಅಟ್ಟದಲ್ಲಿ ಅದೇ ಬೊಂಬೆಗಳು ಇವೆ. showcase ನಲ್ಲಿ ಅಥವಾ ದೇವರಮನೆಯಲ್ಲಿ ಪಟ್ಟದ ಬೊಂಬೆಗಳನ್ನ ಇಟ್ತು ಪೂಜೆ ಮಾಡ್ತೀವಿ. ಮೊದಲಿನ ಹಾಗೆ ಬೊಂಬೆಗಳನ್ನ ತೆಗೆದು ಜೋಡಿಸುವ ಗೊಜಿಗೆಹೊಗುವುದಿಲ್ಲ ಯಾಕಂದ್ರೆ ಅವುಗಳನ್ನ ನೋಡಕ್ಕೆ ಯಾವ ಮಕ್ಕಳೂ ಮನೆಗೆ ಬರುವುದಿಲ್ಲ. ನೋಡಕ್ಕೆ ಯಾರು ಇಲ್ಲದಿದ್ದ ಮೇಲೆ ಇಟ್ತು ತಾನೆ ಏನು ಪ್ರಯೋಜನ?
ಅದಷ್ಟೇ ಅಲ್ಲ. ಅಷ್ಟೆಲ್ಲಾ ಮಾಡೋ ಅಷ್ಟು ಪುರುಸೊತ್ತು ಸಹ ಇಲ್ಲ. :( ನಾವೆಲ್ಲರೂ ನಮ್ಮ ನಮ್ಮ ಫಾಸ್ಟ್ ಲೈಫ್ ಅನ್ನೋ ಪ್ರಪಂಚದಲ್ಲಿ ಕಳೆದುಹೊಗಿದ್ದೇವಿ.

Thursday, May 29, 2008

ನಾಯಿ (ಶುನಕ, ಶ್ವಾನ, ಸಾರಮೇಯ)




ನಾಯಿ ಮರಿ ಅಂದ್ರೆ ಕೆಲವರಿಗೆ ಭಯ ಮತ್ತೆ ಕೆಲವರಿಗೆ ಪ್ರೀತಿ. ನಾಯಿಯನ್ನು ನೋಡಿ ಓಡಿ ಹೋಗುವವರು ಇದ್ದಾರೆ ಅದನ್ನು ಹತ್ತಿರ ಕರೆದು ಮುದ್ದು ಮಾಡುವವರು ಸಹ ಇದ್ದಾರೆ.
ನಾಯಿ ಬಹಳ ಬುದ್ಧಿವಂತ ಹಾಗು ಸೂಕ್ಷ್ಮ ಪ್ರಾಣಿ. ನಾಯಿಗಳು ನಮ್ಮಂತೆ ಮಾತನಾಡದಿದ್ದರೂ ಪ್ರತಿ ಮಾತನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ, ಮಾತುಬರದ ಸಣ್ಣ ಮಗುವಿನಂತೆ.
ನಾಯಿಯ ಸ್ವಾಮಿ ನಿಷ್ಠೆ ಪ್ರೀತಿ ವಿಶ್ವಾಸ ಮನುಷ್ಯ ನೋಡಿ ಕಲಿಯಬೇಕು. ಯಜಮಾನ ಎಂತಹ ಮನುಷ್ಯನೇ ಆಗಿರಲಿ, ನಾಯಿ ನಿಯತ್ತಿಂದ ಇರುತ್ತದೆ. ಮಕ್ಕಳ ಮನಸ್ಸಿನಂತೆ ನಿಷ್ಕಲ್ಮಶವಾದದ್ದು ಅವುಗಳ ಮನಸ್ಸು. ಹುಟ್ಟಿನಿಂದ ಕೊನೆಯವರೆಗೂ ಹಾಗೆ ಇರುತ್ತವೆ ಅವು. ಆದರೆ ಮನುಷ್ಯರು ಬದಲಾಗುತ್ತಾನೆ ಹೋಗುತ್ತಾರೆ ಪ್ರತಿ ದಿನ ಪ್ರತಿ ನಿಮಿಷ ಪ್ರತಿ ಘಳಿಗೆ. ಮನಸ್ಸಿನಲ್ಲಿ ಒಂದು ಹೊರಗೆ ಇನ್ನೊಂದು. ಮೋಸ ವಂಚನೆ ಎಲ್ಲ ಸೇರಿರುತ್ತೆ. ಪ್ರಾಣಿಗಳಿಂದ ಕಲಿಯಬೇಕಾದದ್ದು ತುಂಬ ಇದೆ ಅದ್ರೆ ಕಲಿಯೋ ಮನಸ್ಸು ಹೃದಯ ಇದೆಯೇ?

IBM Imprint Rangoli - May 2008

An ordinary one

Rangoli at Adhamya chetana competition - 2008

NCB Rangoli - 2002

Wednesday, January 2, 2008

ಮನ

ಮನವೇ ಓ ಮನವೇ
ನಿನ್ನ ನೀನೆ ಅರಿಯೆ
ಸ್ನೇಹಕೆ ಸೈ ಎನ್ನುವೆ
ಪ್ರೀತಿಗೆ ಓಗೊಡುವೆ
ಅರಿವಿಲ್ಲದೆ ನೀ ನಗುವೆ
ಅರಿವಿಲ್ಲದೆ ನೀ ಅಳುವೆ
ಅಭಿಮಾನದಿ ಬೀಗುವೆ
ಅವಮಾನಕೆ ತತ್ತರಿಸುವೆ
ಅನುಮಾನದಿ ಕುದಿಯುವೆ
ಅನುಕಂಪದಿ ಸೋಲುವೆ
ನಿನ್ನ ಮಾತು ಹೇಳದೆ
ಗೊಂದಲಕ್ಕೆ ಸಿಲುಕುವೆ
ಸರಿತಪ್ಪು ತಿಳಿಯದೆ
ಇಚ್ಚೆಯಂತೆ ನಡೆಯುವೆ
ಮನವೇ ಓ ಮನವೇ
ನಿನ್ನ ನೀನೆ ಅರಿಯೆ.

ಅಂದು - ಇಂದು

ನಾವೆಲ್ಲ ಚಿಕ್ಕೊರು ಇದ್ದಾಗ ಸ್ಕೂಲ್ ರಜ ಬಂತು ಅಂದ್ರೆ ಮೊದಲು ನೆನಪಾಗ್ತಾ ಇದ್ದಿದ್ದು ಅಜ್ಜಿ ಮನೆ. ಅಮ್ಮ ಅಪ್ಪನ್ನ ಕಾಡಿಸೋ ಪೀಡಿಸೋ ಅಜ್ಜಿಮನೆಗೆ ಹೊರಟರೆ ಸಾಕು. ಅದಕ್ಕಿಂತ ಸಂತೋಷ ಇನ್ನೊಂದಿಲ್ಲ.

ಅಜ್ಜಿ ಮನೆ ಒಂದು ತುಂಬಿದ ಕುಟುಂಬ - ೭ ಜನ ಮಾವಂದಿರು ಅತ್ತೆರು, ಅವರ ಮಕ್ಕಳು ಅಜ್ಜ ತಾತ ಎಲ್ಲ ಇರ್ತಿದ್ರು. ಅಲ್ಲಿ ಹೋದ್ರೆ ಅಜ್ಜಿ ತರತರಹದ ತಿಂಡಿಗಳನ್ನ ಮಾಡಿಕೊಡ್ತಾ ಇದ್ರು, ಜೊತೆಗೆ ಆಡಕ್ಕೆ ನನ್ನ ಮಾವನ ಮಕ್ಕಳು. ಇನ್ನೇನು ಬೇಕು ಆಗ......ಬೆಳಗ್ಗಿಂದ ಸಂಜೆ ತನಕ ಬರಿ ಆಟ - ಅದು ಎಷ್ಟು ಬಗೆಯ ಆಟಗಳನ್ನ ಆಡ್ತಾ ಇದ್ವಿ ಆಗ... ಕಲ್ಲು ಮಣ್ಣು, ಮರಕೊತಿ, ಜೂಟಾಟ, ಅಳುಗುಲಿ ಮನೆ, ಚೌಕಾಭಾರ, ಪಗಡೆ, ಚೂರಚೆಂಡು, ಕಣ್ಣ ಮುಚ್ಚಾಲೆ, ಅಮ್ಮ ಅಪ್ಪ ಆಟ, ಟೀಚರ್ ಆಟ ಒಂದಾ ಎರಡ ?? ಬೆಳಿಗ್ಗೆ ಮನೆ ಬಿಟ್ರೆ ಸಂಜೆ ದೀಪ ಹಚ್ಚೋ ಹೊತ್ತಿಗೆ ಮನೆ ಸೇರ್ತ ಇದ್ವಿ. ದಿನವಿಡೀ ಆಟ. ಸಂಜೆ ದೀಪ ಹಚ್ಚೋ ಮುಂಚೆ ಕೈಕಾಲು ಮುಖ ತೊಳೆದು ರೆಡಿ ಆಗ್ತಾ ಇದ್ವಿ. ದೀಪ ಹಚ್ಚಿದ ಮೇಲೆ ಶ್ಲೋಕಗಳನ್ನ ಹೇಳಿಕೊಳ್ತಾ ಇದ್ವಿ. ಅಜ್ಜಿಮನೇಲಿ ನಾವೆಲ್ಲ ಚಿಕ್ಕೊರು ಜಾಸ್ತಿ ಇರ್ತ್ವಿದ್ವಿ ಅಂತ ಯಾರಾನ ಒಬ್ಬ ಅತ್ತೆ ಊಟಕ್ಕೆ ಎಲ್ಲರಿಗು ಕೈತುತ್ತು ಹಾಕೋರು. ಆ ದಿನಗಳು ಇವತ್ತಿಗೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಭಾನುವಾರದಂದು ಅಮ್ಮ ಅಪ್ಪ ಅಥವಾ ಅತ್ತೆ ಮಾವಂದಿರು ನಮ್ಮಣ್ಣ ಎಲ್ಲಿಗಾನ ಕರ್ಕೊಂಡು ಹೋಗೋರು - ಗಾಂಧಿಬಜ್ಯಾರ್, ಜಯನಗರ ಇಲ್ಲ cubbon ಪಾರ್ಕ್, lalbhag, visveshwaraiah museum etc etc.

ಇದು ಬರಿ ಅಜ್ಜಿ ಮನೆಗೆ ಹೋದಾಗ ಅಷ್ಟೆ ಅಲ್ಲ. ನಮ್ಮ ಮನೇಲೇ ಇದ್ರೂ ಹೀಗೆ. ರಜ ಇತ್ತು ಅಂದ್ರೆ ಮನೆನೇ ಸೇರ್ತ ಇರ್ಲಿಲ್ಲ. ಮನೆ ಹತ್ರ ಇದ್ದ ಗೆಳೆಯರ ಜೊತೆ ಆಟ. ಚೆನ್ನಾಗಿರ್ತಾ ಇತ್ತು ಚಿಕ್ಕಂದಿನ ದಿನಗಳು. ಮರುಕಳಿಸದ ಆ ದಿನಗಳು. ಸೊಗಸಾದ ದಿನಗಳು.

ಇಂದಿನ ಮಕ್ಕಳನ್ನ ನೋಡಿದರೆ ಆಶ್ಚರ್ಯ ಆಗುತ್ತೆ. ಹೆಚ್ಚು ಕಡಿಮೆ ಎಲ್ಲ ಒಬ್ಬೊಬ್ರೆ. ಅಂದ್ರೆ ಅಮ್ಮ ಅಪ್ಪಂಗೆ ಒಬ್ನೇ ಮಗನೋ ಇಲ್ಲ ಮಗಳೋ ಆಗಿರ್ತಾರೆ. ಒಂಟಿಯಾಗಿ ಬೆಳೀತಿರ್ತಾರೆ. ಯಾವಾಗಲು ಕಂಪ್ಯೂಟರ್ ಮುಂದೆ ಇಲ್ಲ ವೀಡಿಯೊ ಗೇಮ್ಸ್ ಇಲ್ಲ ಟಿವಿ ನಲ್ಲಿ ಪೋಗೋ, ಕಾರ್ಟೂನ್ ನೆಟ್ವರ್ಕ್ ಅಂಥ channels. ರಜ ಬಂತು ಅದ್ರೆ summer camps. ಮೇಲೆ ಹೇಳಿದ ಯಾವ ಆಟಗಳು ಅವ್ರಿಗೆ ಗೊತ್ತೆ ಇರಲ್ಲ. ಮನೆ ಹತ್ರ ಇರುವವರ ಸಂಪರ್ಕನೆ ಇರಲ್ಲ. ಒಂಟಿ ಅಗಿಹೊಗ್ತಾರೆ, ಆಗಿಹೋಗಿದ್ದಾರೆ.

ಇಷ್ಟೊಂದು ಬದಲಾವಣೆಯ ಅಗತ್ಯ ಇದೆಯ?? ತಪ್ಪು ಯಾರದ್ದು?? ಬದಲಾಗುತ್ತಿರುವ ಕಾಲನಾ? ಅಮ್ಮ ಅಪ್ಪಂದ?? ಇಲ್ಲ ಈ ಹೊಸ ಸಂಸ್ಕೃತಿನ ? ಅರ್ಥ ಆಗ್ತಾ ಇಲ್ಲ

ಆಧುನಿಕ ಮದುವೆಗಳು

ಈ ಲೇಖನವನ್ನು ಬರಿಯೋದಕ್ಕೆ ಪ್ರೇರಣೆ ಇತ್ತೆಚೆಗಷ್ಟೇ ಆದ ನನ್ನ ಮಾವನ ಮಗಳ ಮದುವೆ.

ಮದುವೆ ಅಂದ್ರೆ ಒಂದು ಪವಿತ್ರ ಬಂಧ. ಗುರುಹಿರಿಯರು ಹಾಗು ಬಂದುಮಿತ್ರರರ ಸಮಕ್ಷಮದಲ್ಲಿ ನೆರೆವೇರಬೇಕು. ಆದರೆ ಅದಕ್ಕಾಗಿ ಹಣವನ್ನು ದುಂಡು ವ್ಯಥ್ಯ ಮಾಡುವುದು ತಪ್ಪಲ್ಲವೇ.

ಈ ಮದುವೆಯ ಖರ್ಚು ನೋಡಿದ್ರೆ ಭಯ ಆಗುತ್ತೆ. ಏನಿಲ್ಲ ಅಂದ್ರೂ ೮ - ೧೦ ಲಕ್ಷಗಳು ಖರ್ಚು ಆಗಿದೆ. ದೊಡ್ಡ ಛತ್ರ - ಅದಕ್ಕೇ ೧ ಲಕ್ಷ. ಇನ್ನು ಮದುವೆಗೆ ಸುಮಾರು ೨೦೦೦ ಜನ. ೩ ದಿನ ಮದುವೆ. ಹುಡುಗಿಗೆ ಒಂದು ಹತ್ತು ಕಂಚಿ ಸೀರೆಗಳು ಜೊತೆಗೆ ಒಂದು ೨೫ - ೩೦ ಬೇರೆ ಸೀರೆಗಳು ಜೊತೆ ಅದೆಷ್ಟೋ ಒಡವೆಗಳು. ಇದು ಹೋಗ್ಲಿ ಬಿಡಿ, ಮದುವೆಗೆ ಮಾಡಿಸಿದ ಅಡುಗೆಗಳನ್ನ ನೋಡಿದ್ರೆ ತಲೆ ಸುತ್ತು ಬರುತ್ತೆ... ಅಂದ್ರೆ ಅಷ್ಟು ಬಗೆಬಗೆಯ ಭಕ್ಶ್ಯಗಳು ಇದ್ವು. ಹೆಚ್ಚುಕಡಿಮೆ ಎಲ್ಲರು ಇಷ್ಟ ಪಡೋ ಅಂತಹ ತಿಂಡಿಗಳು. ಏನಿಲ್ಲ ಅಂದ್ರೆ ಒಂದು ಐದು ಬಗೆಯ ಸಿಹಿತಿಂಡಿಗಳೇ ಇದ್ವು. ಜನರು ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ತಿನ್ನ ಬೇಕು, ಅದ್ರೆ ಹಾಗೆ ಆಗಲ್ಲ. ದುರಾಸೆ ಜಾಸ್ತಿ... ಎಲ್ಲ ಹಾಕಿಸಿಕೊಳ್ಳುತ್ತಾರೆ ಆದ್ರೆ ಎಲ್ಲ ಚೆಲ್ಲುತ್ತಾರೆ. ತಪ್ಪು ಅಲ್ವಾ.... ಎಷ್ಟೋ ಜನಕ್ಕೆ ತಿನ್ನಕ್ಕೆ ಒಂದು ಹೊತ್ತಿನ ಊಟ ಸಹ ಇರಲ್ಲ. ಇದನ್ನ ಯಾರು ಯೋಚನೇನೆ ಮಾಡಲ್ಲ. ಹಾಕಿಸಿಕೊಂಡ ಅನ್ನ ಚೆಲ್ಲೋದೆ ಒಂದು ಫ್ಯಾಶನ್ ಆಗಿಹೋಗಿದೆ. ಇದಷ್ಟೇ ಅಲ್ಲ. ಮದುವೆಗೆ ಬಂದೊರಿಗೆಲ್ಲ ಉಡುಗೊರೆಗಳು - ಒಂದು ಪ್ಲಾಸ್ಟಿಕ್ ಡಬ್ಬಿ ಅದು ಸುಮಾರು ೫೦ ರುಪಾಯಿ ಬೆಲೆಯದ್ದು. ಜೊತೆಗೆ ಹತ್ತಿರದ ಬಂಧುಬಳಗದವರಿಗೆ ಬೇರೆ ಬಗೆಯ ಉಡುಗೊರೆಗಳು - ಸೀರೆ, ಶರ್ಟ್-ಪ್ಯಾಂಟ್ ಪೀಸ್ ಗಳು. ಮತ್ತೆ ಹೂವಿನ ಅಲಂಕಾರಕ್ಕೆ ಸುಮಾರು ದುಡ್ಡು ಖರ್ಚು ಆಗಿತ್ತು.

ಇದು ಬರೀ ನನ್ನ ಮಾವನ ಮಗಳ ಮದುವೆಯ ಕಥೆ ಅಲ್ಲ. ಈ ನಡುವೆ ಎಲ್ಲ ಮದುವೆಗಳು ಹೀಗೆ ಆಗ್ತಾ ಇರೋದು. ಅಂದ್ರೆ ಮಿಡ್ಲ್ ಕ್ಲಾಸ್ ಜನರ ಮದುವೆ. ಇನ್ನು celebrities ಮತ್ತೆ politicians ಮದುವೆಗಳನ್ನ ನೋಡಿಬಿಟ್ರೇ ಅಷ್ಟೆ. ಹಣವನ್ನು ನೀರಿಂತೆ ಖರ್ಚು ಮಾಡ್ತಾರೆ. ಕೋಟಿಗಳ ಲೆಕ್ಕನೆ ಸಿಗಲ್ಲ.

ಇಷ್ಟೊಂದು ಖರ್ಚಿನ ಅಗತ್ಯ ಇದ್ಯ ನಮಗೆ? ಅದೇ ದುಡ್ದನ್ನ ಹುಡುಗಿಯ ಹೆಸರಿನಲ್ಲಿ ಡೆಪಾಸಿಟ್ ಮಾಡಿದಿದ್ರೆ ಕಷ್ಟಕಾಲಕ್ಕೆ ಉಪಯೋಗಕ್ಕೆ ಬಂದಿರೋದು. ಅಥವಾ ಅನಾಥ ಮಕ್ಕಳಿಗೋ ಇಲ್ಲ ಬಡಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಬಹುದಾಗಿತ್ತು ಅಲ್ವಾ.
ಮದುವೆನ ಒಂದು ದೇವಸ್ಥಾನದಲ್ಲಿ ಮಾಡಿಕೊಂಡು ರಿಜಿಸ್ಟರ್ ಮಾಡಿಸಿದರೆ ಸಾಲದೆ? ಮುಖ್ಯ ಗಂಡು ಹೆಣ್ಣು ಸಂತೋಷವಾಗಿ ಸಂಸಾರ ಮಾಡೋದು ಅದಕ್ಕಾಗಿ ಇಷ್ಟೆಲ್ಲಾ ಖರ್ಚು ಮಾಡೋ ಅಗತ್ಯನೇ ಇಲ್ಲ. ದೊಡ್ದು ಇರೋರು ಏನು ಖರ್ಚು ಮಾಡಬಹುದು ಆದ್ರೆ ಇಲ್ಲದೆ ಇರೋರು ಏನು ಮಾಡಕ್ಕೆ ಆಗುತ್ತೆ? ದೊಡ್ದು ಇರೋರು ಮಾಡೋ ಆಡಂಬರದಿಂದಾಗಿ ದುಡ್ಡು ಇಲ್ಲದವರಿಗೆ ಕಷ್ಟ. ಇದನ್ನ ಯೋಚನೆ ಮಾಡಬೇಕು ಜನರು.

ದೀಪಾವಳಿ

ದೀಪಾವಳಿ ಹಬ್ಬ ಬಂತು ಅಂದ್ರೆ ಚಿಕ್ಕವರಿದ್ದಾಗ ತುಂಬ ಸಂಭ್ರಮ ನಮಗೆ. ಮುಖ್ಯ ಅಪ್ಪ ತರುತ್ತಿದ್ದ ಪಟಾಕಿ.
ಅವ್ರು ಫ್ಯಾಕ್ಟರಿನಲ್ಲಿ ೨ ಪಟಾಕಿ ಚೀಟಿ ಹಾಕ್ತಾ ಇದ್ರು ಚೀಪ್ ಆಗಿಸಿಗುತ್ತೆ ಅಂತ ಜೊತೆಗೆ ಗಿಫ್ತ್ಸ್ ಕೂಡ ಇರ್ತ ಇತ್ತು. ಹಬ್ಬಕ್ಕೆ ಇನ್ನ ಒಂದು ತಿಂಗಳು ಇರಬೇಕಾದರೇನೆ ಜನ ಪಟಾಕಿ ಹಚ್ಚಕ್ಕೆ ಶುರು ಮಾಡೋರು. ಪಟಾಕಿ ತಂದಾದ ಮೇಲೆ ಅದನ್ನ ನಾಲಕ್ಕು ಭಾಗ ಮಾಡ್ತಾ ಇದ್ವಿ (೩ ದಿನ ದೀಪಾವಳಿಗೆ ಮತ್ತು ತುಳಸಿ ಹಬ್ಬಕ್ಕೆ). ಅದ್ರಲ್ಲಿ ಮತ್ತೆ ನಾನು ನನ್ನ ತಮ್ಮ ಭಾಗ ಮಾಡಿಕೊಂಡು ಹಬ್ಬದ ದಿನ ಬೇಗ ಎದ್ದು ಎಣ್ಣೆ ನೀರು ಹಾಕಿಕೊಂಡು ಪಟಾಕಿ ಹೊಡ್ಯಕ್ಕೆ ಶುರುಮಡ್ತಾ ಇದ್ವಿ. ಆ ದಿನಗಳು ಇನ್ನ ಹಚ್ಚ ಹಸಿರಾಗಿದೆ ಮನಸ್ಸಿನಲ್ಲಿ.

ಇವತ್ತು ನಮ್ಮ ಹತ್ರ ಎಷ್ಟು ಬೇಕೋ ಪಟಾಕಿ ಖರೀದಿ ಮಾಡೋ ಚೈತನ್ಯ ಇದೆ ಅದ್ರೆ ಆ ಅಸೆ ಇಲ್ಲ. ಹಬ್ಬದ ದಿನ ಕೂಡ ಪಟಾಕಿ ಹೊಡಿಬೇಕು ಅಂತ ಅನ್ನಿಸೋದೇ ಇಲ್ಲ.

This is soo true in case of Guys :)

This is one of the forwards which I enjoyed reading.

The problems with GUYS:

If u TREAT him nicely, he says u are IN LOVE with him;
If u Don't , he says u are PROUD.

If u DRESS Nicely , he says u are trying to LURE him;
If u Don't, he says u are from VILLAGE .

If u ARGUE with him, he says u are STUBBORN ;
If u keep QUIET , he says u have no BRAINS .

If u are SMARTER than him, he'll lose FACE ;
If he's Smarter than u, he is GREAT.

If u don't Love him, he tries to POSSESS u;
If u Love him! , he will try to LEAVE u.(very true huh?)

If u don't make love with him., he says u don't Love him;
If u do!! he says u are CHEAP.

If u tell him your PROBLEM , he says u are TROUBLESOME;
If u don't , he says that u don't TRUST him.

If u SCOLD him, u are like a NANNY to him;
If he SCOLDS u, it is because he CARES for u.

If u BREAK your PROMISE, u Cannot be TRUSTED;
If he BREAKS his, he is FORCED to do so.

If u SMOKE , u are BAD girl;
If he SMOKES, he is GENTLEMAN.

If u do WELL in your exams, he says it's LUCK ;
If he does WELL , it's BRAINS.

If u HURT him, u are CRUEL;
If he HURTS u, u are too SENSITIVE !!

Some interesting facts about MEN!!

1. All men are extremely busy.
2. Although they are so busy, they still have time for women.
3. Although they have time for women, they don't really care for them.
4. Although they don't really care for them, they always have one Around.
5. Although they always have one around them, they always try their Luck with others.
6. Although they try their luck with others, they get really pissed off If the women leaves them.
7. Although the women leaves them they still don't learn from their
Mistakes and still try their luck with others.

My college



National College, basavanagudi (2000-2002)

Final Year group Photo with Dr. H.Narasimhaiah, SBR, MSVR, HPP n other lecturers

One More!!



Never Stop Dreaming!! A person without dreams is equal to a deadman. Dreams make you feel alive, Inspires you to face life and help you cope with difficult situations.
Dream & Dream & Dream & fulfill all your dreams!!!!
Optimism is more important. Dreams with Optimism and hardwork is all thats needed to be successful n happy in life.

An Inspiring Quote




Isn't it Inspiring?

We all make mistakes. No use crying for it. WE need to learn our lesson from mistakes and move on with our lifes. No use regretting.

ಜೊತೆಗಿಹರು ಯಾರು

ಕನಸುಗಳ ಗೋಪುರವ
ಏರುವ ಸಮಯದಲಿ
ಸುತ್ತಲಿನ ಜನರು
ಕೈಬಿಡಲು ಕಾದಿರಲು
ದೂರ ಸರಿಯುವ
ಸ್ನೇಹಿತರ ಮರೆಯಲಾಗದೆ
ತೊಳಲಾಡುತಿದೆ ಮನವು.

ಕನಸುಗಳ ನನಸಾಗಿಸಲು
ಕಲ್ಲುಮುಳ್ಳುಗಳ ಹಾದಿಯನು
ಕ್ರಮಿಸಬೇಕು, ಜೊತೆಗಾಗಿ
ಕಾಯದೆ, ಏಕಾಂಗಿಯಾಗಿ
ಗುಂಪಿನಿಂದ ದೂರಾಗಿರುವ
ಮುಗ್ಧ ಪಕ್ಷಿಯಂತೆ
ಚಡಪಡಿಸುತಿದೆ ಮನವು.

ಮೋಡ ಮುಸುಕಿದ
ಆಗಸದಿ ಮಿನುಗುತಿದೆ
ನಕ್ಷತ್ರಗಳು, ಹೊಮ್ಮಿಸುತ್ತಿವೆ
ಆಶಾವಾದದ ಬೆಳಕು
ದೂರಾದವರ ಮರೆತು
ಹೊಸಲೋಕವ ಹುಡುಕುತಾ
ಬೆಳಕಿನ ಬೆನ್ನಹತ್ತುತಿದೆ ಮನವು.

ಪ್ರಕೃತಿ

ಮಧು ತುಂಬಿದ ಹೂವು
ಮದವೇರಿದ ದುಂಬಿ
ಮದದಿಂದ ಮಧು ಹೀರಿ
ಮಧುರಾನುಭೂತಿಯ ಪಡೆಯಿತು
ದುಂಬಿ ಬಾಡಿಸಿತು ಹೂವು.

ಮಾಮರದ ಮಾಗಿದ ಮಾವು
ಅದ ಹುಡುಕಿ ಹಾರಿತು ಗಿಣಿಯು
ಮರವೇರಿ ಮುತ್ತಿತು ಮಾವನು
ಕ್ಷಣದಲಿ ಸವಿಯಿತು ಗಿಣಿಯು
ಮಾಗಿದ ಮಾವಿನಹಣ್ಣನು.

ಮಳೆ ತುಂಬಿದ ಮೋಡ
ಮೈಸುಡುವ ನೇಸರ
ತನ್ನ ಪ್ರಖರತೆಯ ಬೀರಿ
ತುಂಬಿದ ದೇಹದ ಮೋಡವ
ಕರಗಿಸಿ ಮಳೆಯಾಗಿಸಿತು.

ಮುಗಿಲ ನಿರ್ಮಲ ಬಿಳುಪು
ಕತ್ತಲ ಕಾಮುಕ ಕಪ್ಪು
ಬಿಳುಪನಾವರಿಸಿತು ಕಪ್ಪು
ಕದಡಿತದರ ನಿರ್ಮಲತೆಯ
ಮೂಡಿಸಿತು ಅಳಿಸಲಾರದ ಛಾಪು.

ಹುಡುಕಹೊರಟಿತು ಹೊಸಹೂವನು ದುಂಬಿ
ತಣಿಯದೇನೋ ಒಂದರಿಂದದರ ದಾಹ
ಪಡೆಯಹೊರಟಿತು ಹೊಸ ಮಾವನು ಗಿಣಿಯು
ತಣಿಯದೇನೋ ಒಂದರಿಂದದರ ಹಸಿವು.

ಚದುರಹೊರಟಿತು ಹೊಸ ಮೋಡವ ನೇಸರ
ಅಳಿಸಲನೇಕ ಮೋಡಗಳ
ಕದಡಹೊರಟಿತು ಬಿಳಿಬಣ್ಣವ ಕರಿಯು
ಮತ್ತೆ ಕದಡಲದರ ನಿರ್ಮಲತೆಯ.

ಬಾಡಬೇಕೆ ಹೂವು? ಕೊಳೆಯಬೇಕೆ ಮಾವು?
ಕರಗಬೇಕೆ ಮೋಡ? ಕೆಡಬೇಕೆ ಬಿಳುಪು?
ಇದ ನೋಡಿ ರೋಸಿಹೋಗದೇ ಭೂತಾಯಿಯ ಮನವು
ಈ ನೀತಿಯ ಬದಲಿಸಲಾರಳೇ ಅವಳು?

ಗೆಳೆತನ

ಅಂದಿನ ಗೆಳೆತನದ ನೆನಪುಗಳು ಹಚ್ಚ ಹಸಿರಾಗಿದೆ ಮನದಲ್ಲಿ
ಮರೆತಿಲ್ಲ ನಿನ್ನ ಗೆಳೆಯ, ನೀ ಇರುವೆ ನನ್ನ ಹೃದಯಮಂದಿರದಲ್ಲಿ.

ಪ್ರತಿದಿನವು ಶಾಲೆಗೆ ಜೊತೆಯಾಗಿ ನಡೆದುಹೋಗುತ್ತಿದ್ದೆವು
ತಂದ ತಿಂಡಿಯ ಹಂಚಿ ತಿನ್ನುತ್ತಿದ್ದೆವು
ಸಂಜೆಗತ್ತಲಾದರೂ ತೋಟದಲ್ಲಿ ಜೊತೆಯಾಗಿ ಆಡುತ್ತಿದ್ದೆವು
ಒಮ್ಮೆಯಾದರೂ ಒಬ್ಬರನ್ನೊಬ್ಬರು ನೋಡದೆ ಇರುತ್ತಿರಲ್ಲಿಲ್ಲವಲ್ಲವೆ ಗೆಳೆಯಾ?

ಮುಂದಿನ ಶಿಕ್ಷಣಕ್ಕಾಗಿ ಇಬ್ಬರೂ ಬೇರೆ ಬೇರೆ ಊರು ಸೇರಿದೆವು
ಆದರೂ ಪತ್ರ ಮುಖೇನ ಸಂಪರ್ಕಿಸುತ್ತಿದ್ದೆವು.
ವಾರಕ್ಕೊಮ್ಮೆ ಬರುತ್ತಿದ್ದ ನಿನ್ನ ಪತ್ರಗಳು ತಿಂಗಳಿಗೊಂದಾಯಿತು,
ಕ್ರಮೇಣ ನಿಂತೇಹೋಯಿತು
ಯಾಕೆ ಗೆಳೆಯ, ಹೊಸ ಗೆಳೆಯರ ಸಮೂಹದಲ್ಲಿ ನಿನ್ನ
ಪ್ರೇಮದ ಗೆಳೆತಿಯ ಮರೆತೆಯಾ?

ಅಂದು ನಾವು ನೆಟ್ಟು ನೀರೆರೆದ ಸಸಿಗಳು ಬೆಳೆದು ಹೆಮ್ಮರವಾಗಿವೆ
ಆದರೆ ನಮ್ಮ ಗೆಳೆತನವು ಮಾತ್ರ ನೀರಿಲ್ಲದೆ ಸೊರಗಿಹೋಗಿದೆ
ಯಾರಿಗೆ ಹೋಲಿಸುವುದು ನಮ್ಮ ಗೆಳೆತನವ, ದ್ರುಪದ-ದ್ರೋಣರಿಗೊ
ಅಥವ ಕೃಷ್ಣ-ಕುಚೇಲರಿಗೊ?
ಒಡೆದ ಕನ್ನಡಿಯಂತಾಗಿದೆ ನಮ್ಮ ಸ್ನೇಹ, ಚೂರುಗಳನ್ನು ಬಿಸಾಡಬಹುದೇ
ಹೊರತು ಸೇರಿಸಲಾಗದು.

ಇಂದು ನೀ ಎಲ್ಲಿರುವೆ ಎಂದು ತಿಳಿಯದು, ಏನಾಗಿರುವೆ ಎಂದೂ ತಿಳಿಯದು
ಆದರೂ ನಿನ್ನ ಕಾಣಬೇಕೆಂಬ ಪರಿತಪನೆ ನನಗೆ ಗೆಳೆಯಾ
ನನ್ನ ಕಾಡುವ ನಿನ್ನ ನೆನಪುಗಳಂತೆ, ನಿನಗೆಂದೂ ನಾ
ನೆನಪಾಗುವುದಿಲ್ಲವೇ ಗೆಳೆಯಾ?
ನೀ ನನ್ನ ಮರೆತರೇನಂತೆ, ಎಂದಿಗೂ ನಾ ನಿನ್ನ ಒಳಿತನ್ನೇ ಬಯಸುವವಳು.

ಅಂದಿನ ಗೆಳೆತನದ ನೆನಪುಗಳು ಹಚ್ಚ ಹಸಿರಾಗಿದೆ ಮನದಲ್ಲಿ
ಮರೆತಿಲ್ಲ ನಿನ್ನ ಗೆಳೆಯ, ನೀ ಇರುವೆ ನನ್ನ ಹೃದಯಮಂದಿರದಲ್ಲಿ.

ಭಾವನೆಗಳು

ಮನದ ಭಾವನೆಗಳೆಲ್ಲ ಸೇರಿ ಭಾವಗೀತೆ ಮೂಡಿತು
ರಾಗ ರಸಭಾವಗಳೆಲ್ಲ ಸೇರಿ ಮಧುರಗೀತೆ ಆಯಿತು.

ಬಣ್ಣ ಬಣ್ಣದ ಭಾವನೆಗಳು ಕಾಮನಬಿಲ್ಲಿನಂತೆ ಹೊಮ್ಮಿತು
ಬೇರೊಂದು ಲೋಕವ ಪರಿಚಯಿಸಿ ವಾಸ್ಥವಕ್ಕೆ ಮರಳಿತು.
ಅಂತರಂಗದ ಸುಪ್ತ ಭಾವಗಳು ರೆಕ್ಕೆ ಬಿಚ್ಚಿ ಹಾರಿತು
ಮುಗಿಲ ಮುಟ್ಟಿ ಭಯವ ಮೆಟ್ಟಿ ಸಂತಸದಿ ಮನ ಬೆಳಗಿತು.

ಮನದ ಮಧುರ ಭಾವಗಳೆಲ್ಲ ಅಕ್ಷರ ರೂಪ ಪಡೆಯಿತು
ಸುಂದರ ಸವಿಭಾವಗಳೆಲ್ಲ ನಿತ್ಯನಿರಂತರವಾಯಿತು.
ಮನದ ಭಾವಗಳಿಗೆಲ್ಲ ಹೃದಯವು ಮೌನವಾಗಿ ಸಮ್ಮತಿಸಿತು
ರಾಗ ರಂಜಿತ ಮನದ ಭಾವಗಳು ಮಧುರ ಭಾವಗೀತೆಯಾಯಿತು.

ಮನದ ಭಾವನೆಗಳೆಲ್ಲ ಸೇರಿ ಭಾವಗೀತೆ ಮೂಡಿತು
ರಾಗ ರಸಭಾವಗಳೆಲ್ಲ ಸೇರಿ ಮಧುರಗೀತೆ ಆಯಿತು.

ಮುಸ್ಸಂಜೆ

ಮುಸ್ಸಂಜೆಯ ಹೊಂಬೆಳಕಿನಲ್ಲಿ ಮಾಮರದ ನೆರಳಲ್ಲಿ
ನೀ ಬರುವೆಯೆಂದು ಕಾದೆನು ಗೆಳೆಯ, ಸಮಯದರಿವಿಲ್ಲದೆ ಕಾದೆನು.

ಆಹಾರ ಹುಡುಕಿ ಹೊರಟಿದ್ದ ಹಕ್ಕಿಗಳು ಮರಳಿದವು ಗೂಡಿಗೆ
ಉದಯಿಸಿದ್ದ ರವಿಯು ಮುಳುಗಿ ಶಶಿ ಮೂಡಿ ಬರುತ್ತಿರುವನು
ಪ್ರಕೃತಿಯೇ ನಿದ್ರಿಸಲನುವಾಗುತ್ತಿರುವಾಗ ನಾನೊಬ್ಬಳು ಮಾತ್ರ
ಇದಾವುದರ ಪರಿವಿಲ್ಲದೆ ಕಾದಿರುವೆನು ಗೆಳೆಯ ನಿನಗಾಗಿ, ನಿನ್ನ ಆಗಮನಕ್ಕಾಗಿ.

ಮಾಮರದ ಕೋಗಿಲೆಯು ಕೂಗುತ್ತಿಲ್ಲ ತನ್ನ ಸಂಗಾತಿ ಜೊತೆಗಿದೆಯೆಂದೇನೋ
ಮಲ್ಲಿಗೆಯ ಸುಗಂಧವು ಪಸರಿಸಿದೆ ಗಾಳಿಯಲ್ಲಿ,ನನ್ನಲ್ಲಿರುವ ನಿನ್ನ ಸವಿನೆನಪಿನಂತೆ
ಕೃಷ್ಣನಿಗೆ ಕಾದ ರಾಧೆಯೇ ಧನ್ಯಳು ಅವನ ದರ್ಶನವನ್ನಾದರೂ ಪಡೆದೆಳು
ನೀ ಎಂದು ಬರುವೆ ಗೆಳೆಯ? ನಾ ರಾಧೆಯಾದರೆ ನೀ ಕೃಷ್ಣನಾಗಲಾರೆಯಾ.

ಮುಸ್ಸಂಜೆಯ ಹೊಂಬೆಳಕು ಕರಗಿ ಕತ್ತಲೆಯಲ್ಲಿ ಪ್ರಕೃತಿಯು ಕ್ರೂರವಾಗಿ ತಲೆಯೆತ್ತಿನಿಂತಿದೆ
ನೀ ಬರುವೆಯೆಂದು ಕಾಯುತ್ತಿರುವೆನು ಗೆಳೆಯ, ಸಮಯದರಿವಿಲ್ಲದೆ ಕಾಯುತ್ತಿರುವೆನು.

ಮುರಳಿಗಾನ

ಕಾವೇರಿಯ ತೀರದಲಿ ಮೋಹಕ ಮುರಳಿಯ ನಾದದಲಿ
ತೇಲಿಹೋದೆನು ನಾನು, ನಿನ್ನನರಸುತ ಕಳೆದುಹೋದೆನು ನಾನು.

ಅಲೆಗಳ ಭೋರ್ಗರೆತದ ನಡುವೆ ಕೇಳಿತು ಮುರಳಿಗಾನವು
ಕದಡಿತು ಮನವ, ಕರೆದೊಯ್ದಿತು ಸವಿನೆನಪುಗಳ ಲೋಕದೊಳು.
ನಿದಿರಾದೇವಿಯ ಮರೆತು ಸವಿದೆನು ಮುರಳಿಯ ಗಾನಸುಧೆಯ
ಎಷ್ಟು ಸವಿದರೂ ತಣಿಸದು ನನ್ನ ದಾಹವ ನಿತ್ಯ ನಿರಂತರ ಮುರಳಿಗಾನವು.

ಕಡುಗತ್ತಲ ರಾತ್ರಿಯಲಿ ಗಿಡಮರಗಳ ನಡುವೆ ಕೇಳಿತು ಮುರಳಿಗಾನವು
ಕಾತರಿಸಿದೆ ನಿನ್ನ ಸಮೀಪಿಸಲು, ಚಂದ್ರನನುಸರಿಸುವ ಮೋಡದಂತೆ
ನಾದಕ್ಕೆ ತಲೆಬಾಗಿದೆ ನಾಗಿಣಿಯಂತೆ, ಮನಸೋತು ನಾದದೊಳೊಂದಾದೆ.
ಹೂವ ಕೆಣಕುವ ದುಂಬಿಯಂತೆ, ಕಿವಿಯಲ್ಲಿ ಝೇಂಕರಿಸಿತು ಮುರಳಿಗಾನವು.

ತೀರ ಬೇರಾದರೇನು, ನಿನ್ನ ಮನವ ಪರಿಚಯಿಸಿತು ಮುರಳಿಗಾನವು
ನಮ್ಮ ಸುಂದರ ಬದುಕಿಗೆ ಮಂಗಳ ನಾದವಾಯಿತು ಮುರಳಿಗಾನವು.

ಕಂಗಳು

ಹೃದಯ ಮಾತು ಹೇಳಿತು ಕಂಗಳು
ಕೇಳಿದೆಯಾ ಗೆಳೆಯ?
ಪ್ರೀತಿಯ ಭಾಷೆ ಆಡಿತು ಕಂಗಳು
ಆಲಿಸಿದೆಯಾ ಗೆಳೆಯ?
ಹೃದಯದಿ ನಿನ್ನ ಚಿತ್ರವ ಬರೆಯಿತು
ನೋಡಿದೆಯಾ ಗೆಳೆಯ?
ಸುಂದರ ಲೋಕವ ಸೃಷ್ಟಿಸಿ ನಲಿಯಿತು
ನಿನ್ನೊಂದಿಗೆ ಗೆಳೆಯ.

ನನ್ನನು ಸೆಳೆಯಿತು ನಿನ್ನಯ ಕಂಗಳು
ಅರಿತಿರುವೆಯಾ ಗೆಳೆಯ?
ನಿನ್ನನು ಸೆಳೆಯಿತು ನನ್ನಯ ಕಂಗಳು
ನಿಜವಲ್ಲವೆ ಗೆಳೆಯ?
ನಿನ್ನಯ ಒಲವಿನ ಆಸರೆ ಬಯಸಿತು
ನೀಡುವೆಯಾ ಗೆಳೆಯ?
ಜೀವನ ಪೂರ್ತಿಯ ಜೊತೆಯನು ಬಯಸಿತು
ನಿನ್ನೊಂದಿಗೆ ಗೆಳೆಯ.

ಗಿಡಮರಗಳು

ಗಿಡಮರಗಳ ನೆರಳಿಲ್ಲದ ಊರು
ಹೃದಯವೇ ಇಲ್ಲದ ದೇಹದಂತೆ
ಗಿಡಮರಗಳ ಹಸಿರೇ ಜೀವನದ ಉಸಿರು.

ಸಸಿ ನೆಟ್ಟು ನೀರೆರೆದರೆ ಮರವಾಗುವುದು
ಮರಗಳು ಮುದ್ದಾದ ಪಕ್ಷಿಗಳ ವಾಸಸ್ಥಾನವಾಗುವುದು
ಫಲಪುಷ್ಪಗಳನ್ನು ಕೊಡುವ ಮರ, ದಾರಿಹೋಕರಿಗೆ ನೆರಳನ್ನು ಕೊಡುವುದು
ಅಂತಹ ಮರಗಳನ್ನು ಕಡಿಯುತ್ತಿರುವವರು ಹೃದಯಹೀನ ಮನುಷ್ಯರು.

ಉಸಿರಾಡುವ ಗಾಳಿಯನ್ನು ಶುದ್ಧಗೊಳಿಸುತ್ತಿದೆ ಗಿಡಮರಗಳು
ಕಾಲಕಾಲಕ್ಕೆ ಮಳೆಯಾಗಿಸಿ, ಜೀವನವ ಹಸನಾಗಿಸುತ್ತಿದೆ ಗಿಡಮರಗಳು
ಸುಂದರ ಪ್ರಕೃತಿಯ ಆಧಾರವೇ ಗಿಡಮರಗಳು
ಹಸಿರು ವನಗಳಿಲ್ಲದ ಮರಳುಗಾಡುಗಳ ಸೃಷ್ಟಿಯಲ್ಲಿ ತೊಡಗಿದ್ದಾರೆ ಮನುಷ್ಯರು.

ವನಸಿರಿಯು ನಶಿಸಿದರೆ ದುರ್ಬರವಾಗುವುದು ಜನ ಜೀವನ
ಮರಗಿಡಗಳ ಆಶ್ರಯವಿಲ್ಲದೆ ನಶಿಸುವುದು ಪ್ರಾಣಿ ಸಂಕುಲ
ವಿಷಗಾಳಿಯ ಉಸಿರಾಡಿ, ಫಲಪುಷ್ಪ ಆಹಾರವಿಲ್ಲದೆ ಬದುಕುವರೇ ಜನರು?
ಕಾಂಚಾಣದ ದುರಾಸೆಯಿಂದ ವಿನಾಶದೆಡೆಗೆ ಸರಿಯುತ್ತಿದ್ದಾರೆ ಮನುಷ್ಯರು.

ಗಿಡಮರಗಳಿಲ್ಲದ ಜಗವ ಊಹಿಸಲಸಾಧ್ಯ
ಗಿಡಮರಗಳೆ ಜೀವನದ ಆಧಾರ
ಗಿಡಮರಗಳ ಹಸಿರೇ ಜೀವನದ ಉಸಿರು.

ರಂಗೋಲಿ




ಚುಕ್ಕೆಗಳ ಚಿತ್ತಾರ, ಗೆರೆಗಳ ಗುದ್ದಾಟ
ಎರಡರ ಸಂಗಮವೇ ಸುಂದರ ರಂಗೋಲಿ.

ದಿನವೂ ಮುಂಜಾನೆ ಮನೆಯ ಮುಂದೆ ಹಾಕುವೆವು ರಂಗೋಲಿ
ಪೂಜೆಗಾಗಿ ದೇವರ ಮುಂದೆ ಹಾಕಲೇಬೇಕು ರಂಗೋಲಿ
ಕಣ್ಮನ ತಣಿಸಿ ಮನಸ್ಸಿಗೆ ಮುದ ನೀಡುವುದು ರಂಗೋಲಿ
ಬಿಳಿಯ ಬಣ್ಣದ ಸುಂದರ ಕಲಾಕೃತಿ ರಂಗೋಲಿ.

ಹೆಂಗಸರ ಕಲಾಕೌಶಲ್ಯದ ಪ್ರಮಾಣ ರಂಗೋಲಿ
ಭಾರತಿಯ ಸಂಸ್ಕೃತಿಯ ಪ್ರತೀಕ ರಂಗೋಲಿ
ಆಗಸದಂತೆ ಎಲ್ಲ ಬಣ್ಣಗಳ ಮಿಶ್ರಣ ರಂಗೋಲಿ
ನೆಮ್ಮದಿ ನಿರ್ಮಲತೆಯ ಸಂಕೇತ ರಂಗೋಲಿ.

ಚುಕ್ಕೆಗಳ ಚಿತ್ತಾರ, ಗೆರೆಗಳ ಗುದ್ದಾಟ
ಎರಡರ ಸಂಗಮವೇ ಸುಂದರ ರಂಗೋಲಿ.

ಕನಸು

ದಿನ ನಿತ್ಯ ಕನಸಿನಲಿ ಕಂಡೆ ನಾ ನಿನ್ನ
ನನಸಾಗಲಿ ನನ್ನ ಕನಸು ಎಂದು ಪ್ರಾರ್ಥಿಸಿದೆ ದಿನಾ.

ನಿನ್ನೊಡನೆ ವಿಹರಿಸಿದ ಕನಸಿನಾ ಲೋಕವನು
ಜೀವವಿರುವವರೆಗು ಮರೆಯಲಾರೆನು ನಾನು.

ಕನಸಿನಲಿ ಕಂಡ ನಿನ್ನ ಮುಖಾರವಿಂದವ
ನಿಜ ಜೀವನದ ಮುಖಗಳಿಗೆ ಹೋಲಿಸಿದೆ ಚಿನ್ನ,

ಯಾರನ್ನೂ ಹೋಲದು ನಿನ್ನ ಈ ಮುದ್ದು ಮುಖವು
ನನ್ನ ಕನಸುಗಳಿಗೆ ಮಾತ್ರ ಸೀಮಿತವಾಗಿರುವ ನಿನ್ನ ಈ ಮುದ್ದು ಮುಖವು.

ನಿಜವಾಗಿ ನನಗೆ ಕಾಣಿಸಿದರೆ ನೀನು
ಗುರುತಿಸಲು ನಾನು, ಯಾರೆಂದು ಕೇಳುವೆ ನೀನು.

ಬಾಳ ಪೂರ್ತಿಯ ವಿರಹಕ್ಕಿಂತ ಕನಸಿನ ಪ್ರೀತಿಯೇ ಚೆನ್ನ ಗೆಳೆಯ, ಪ್ರೀತಿಯೇ ಚೆನ್ನ
ನಿಜವಾಗದಿದ್ದರೂ ಈ ಮಧುರ ಕನಸುಗಳು ಜೀವನಾಧ್ಯಂತ ನನ್ನ ಜೊತೆಗಿರುವವು
ಆ ಕನಸಿನಲ್ಲಿ ಎಂದಿಗೂ ನೀ ನನ್ನೋಡನಿರುವೆ ಗೆಳೆಯ, ಎಂದೆಂದಿಗೂ.

ದಿನ ನಿತ್ಯ ಕನಸಿನಲಿ ಕಂದೆ ನಾ ನಿನ್ನ
ನನಸಾಗದಿರಲಿ ನನ್ನ ಈ ಕನಸು ಎಂದು ಪ್ರಾರ್ಥಿಸುವೆ ನಾ ದಿನಾ.

ನಾನು-ನೀನು

ನೂರು ನಯನ ಸಾಲದು ನಿನ್ನನೊಮ್ಮೆ ನೋಡಲು
ನೂರು ಜನುಮ ಸಾಲದು ನಿನ್ನ ಸ್ನೇಹ ಸವಿಯಲು.

ಜಗಗೆದ್ದ ಸಂಭ್ರಮ ನನಗೆ ನೀನೊಮ್ಮೆ ಮುಗುಳ್ನಗಲು
ಜೀವನಕತ್ತಲಗವಿಯಾಗುವುದು ನೀನಿಲ್ಲದಿರಲು.

ಸ್ವರ್ಗಸವಿದ ಸಂತಸ ನನಗೆ ನೀ ನನ್ನ ಜೊತೆಗಿರಲು
ಈ ಜೀವ ಜವರಾಯನ ಪಾಲಾಗುವುದು ನೀ ಜೊತೆಗಿಲ್ಲದಿರಲು.

ಕಾದಿರುವೆನು ನಾನು ನಿನ್ನ ಪ್ರೇಮಧಾರೆಯಲಿ ಮುಳುಗಲು
ನೀ ಬರದಿದ್ದರೆ ಸಿದ್ದವಾಗಿರುವೆನು ಪ್ರಪಾತಕ್ಕೆ ಧುಮುಕಲು.

ನೂರು ನಯನ ಸಾಲದು ನಿನ್ನನೊಮ್ಮೆ ನೋಡಲು
ನೂರು ಜನುಮ ಸಾಲದು ನಿನ್ನ ಸ್ನೇಹ ಸವಿಯಲು.

-*-

ಕಾಲಚಕ್ರ

ಮುಂಜಾನೆಯ ಸವಿ ಸಮಯದಲಿ, ಉದಯಿಸುವನು ರವಿ
ಮನೆಮನವ ಬೆಳಕಾಗಿಸಿ ಹೊಸಕಳೆಯನು ತರುವನು
ಜಗವೆಲ್ಲ ನಗುವುದು ಅವನ ನಗುವಿನಲಿ
ತೇಲಿಹೋಗುವರು ಅವನ ಮುಗ್ಧತೆಯ ಮೋಡಿಯಲಿ.

ಅವನ ತುಂಟಾಟ ನೋಡಿ ನಕ್ಕು ನಲಿವರು ಎಲ್ಲರು
ಮುತ್ತಿನ ಮಳೆಗೆರೆದು ಮುದ್ದಿಸುವರು ಎಲ್ಲರು
ಮಾಡಿದ್ದೆಲ್ಲವ ಸಹಿಸಿ ಸರಿ ಎನ್ನುವರು ಎಲ್ಲರು
ತಪ್ಪು ಹೆಜ್ಜೆಗಳ ನೋಡಿ ಕೇಕೇಹಾಕುವ ಮೂಢರು.

ಪ್ರಖರವಾದ ನೇಸರ ನೆತ್ತಿಯ ಮೇಲೆ ಬಂದಿಹನು
ಕ್ಷಣಿಕ ಲೋಭಕ್ಕೆ ಮರುಳಾಗಿ ನಂಬಿದವರ ಮರೆವನು
ತಾನು ನಡೆವ ಹಾದಿಯೇ ಸರಿ ಎಂದು ವಾದಿಸುವನು
ತನ್ನಂತೆ ಬೇರಾರಿಲ್ಲವೆಂದು ಮೆರೆವನು.

ಯೌವನದ ಬೇಗೆಯಲಿ ಅರಿವಿಲ್ಲದೆ ಬೇಯುತಿಹನು
ಸರಿತಪ್ಪುಗಳ ಅರಿವಿಲ್ಲದೆ, ಯಾರನ್ನೂ ನಂಬದೇ ಸಾಗುತಿಹನು
ಬಿಸಿರಕುತದ ಮದದಿಂದ, ಅರೆವಿಧ್ಯೆಯ ದೆಸೆಯಿಂದ ಎಡವುತಿಹನು
ಎಡವಿದರೂ ಇಲ್ಲವೆಂದು ತನಗೆ ತಾನೆ ಮೋಸ ಮಾಡಿಕೊಳ್ಳುತಿಹನು.

ಮುಸ್ಸಂಜೆಯ ತಂಗಾಳಿಯ ತಂಪಾದ ಸಮಯದಲಿ
ಗತ ಜೀವನದ ನೆನಪುಗಳ ಮೆಲಕುಹಾಕುವ ಕಾಲದಲಿ
ನಡೆದು ಬಂದ ಹಾದಿಯನು ತಿರುಗಿ ನೋಡುವ ಬಯಕೆ
ಹೆದರಿಸುವವು ಮುಗಿಸಲಾಗದ ತಪ್ಪುಒಪ್ಪುಗಳ ಎಣಿಕೆ.

ಮರೆತುಹೋದ ಸಂಬಂಧಗಳು ನೆನಪಾಗುವವು ಅವನಿಗೆ
ವ್ಯಥೆಪಟ್ಟರೂ ಮರುಕಳಿಸದು ಮುಗ್ಧತೆಯ ಆ ಸವಿಗಳಿಗೆ
ಗೊತ್ತುಗುರಿಯಿಲ್ಲದ ಹಾದಿಯನು ಸವೆದಿರುವನು
ಗಾಣದೆತ್ತಿನ ಸಮಾನವಾಗಿ ಜೀವಿಸುತ್ತಿರುವನು.

ಮುಸ್ಸಂಜೆಯ ಮಂಬೆಳಕು ಸರಿದು ಗಾಡ ಕತ್ತಲೆಯಾವರಿಸಿದೆ
ಕತ್ತಲೆಯಲಿ ಬೆಳಕಿಗಾಗಿ ತಡಕಾಡುತ್ತಿರುವನು
ಜೀವನದೋಟವ ಮುಗಿಸಿ ಕತ್ತಲೆಯಲಿ ಕರಗಿಹೋಗುವನು
ಜೀವನಚಕ್ರದ ಸುಳಿಯಲಿ ಸಿಕ್ಕಿ ಮಣ್ಣಾಗುವನು.

ರಾತ್ರಿಯ ಕತ್ತಲೆ ಸರಿದು ಮತ್ತೆ ಬೆಳಕು ಮೂಡುವುದು
ಕತ್ತಲು ಬೆಳಕಿನೊಡನೆ ಕಾಲಚಕ್ರ ಆಟವಾಡುವುದು
ಹುಟ್ಟುಸಾವುಗಳು ಕಾಲಚಕ್ರದ ಅಡಿಯಲ್ಲಿ ಸಿಕ್ಕಿರುವುದು
ಏನಾದರೇನು ಕಾಲಚಕ್ರ ಮಾತ್ರ ನಿಲ್ಲದೆ ತಿರುಗುತಿಹುದು.

ಬದಲಿಸಿಕೊಳ್ಳಬೇಕು ಮನುಜನು ತನ್ನ ನೀತಿಯನು
ನಾಲ್ಕುಗಳಿಗೆಯ ಬದುಕಿನಲಿ ಸಮರಸದಿ ಬಾಳಬೇಕು
ಮರೆಯಬೇಕು ದ್ವೇಷಾಸೂಯೆಗಳ, ಅಹಂಭಾವ ಅಹಂಕಾರಗಳ
ಬದುಕಬೇಕು ಎಲ್ಲರೊಂದಿಗೆ ನಿರ್ಮಲ ನಿಸ್ವಾರ್ಥ ಪ್ರೀತಿಯಲಿ.

ಶಕುಂತಲ

(This was again written for the same pencil sketch of the girl)

ಕಾನನದಿ ಅರಳಿದ ಹೂವು
ನಿರೀಕ್ಷಿಸುತಿಹಳು ಭ್ರಮರವನು
ಅನಸೂಯ ಪ್ರಿಯಂವದೆಯರಿಲ್ಲ
ಬರದಿರಲಿ ಮತ್ತೊಬ್ಬ ದುಶ್ಯಂತ
ಆಗದಿರಲಿ ಇವಳು ಶಕುಂತಲ.

ಯಾರಿವಳು?

(This poem was written on a beautiful pencil sketch of a girl done by a friend of mine. )

ಯಾರಿವಳು? ಯಾರಿವಳು? ಕಣ್ಮನ ತಣಿಸುವ
ಮುದ್ದನು ಬರಿಸುವ ಚಂದದ ಚೆಲುವೆ ಯಾರಿವಳು?

ಬಿಡುವಿನಲ್ಲಿ ಬ್ರಹ್ಮ ಬರೆದ ಬೊಂಬೆ ಇವಳು
ಶಾರದೆಯ ಮರೆತು ಕನಸಿನಲ್ಲಿ ಕಂಡ ಗೊಂಬೆ ಇವಳು
ಮಾರನಿಗೆ ರತಿಯ ಮರೆಸುವ ಚೆಲುವೆ ಇವಳು
ರಾಧೆಯ ಮರೆಯಿಸಿ ಕೃಷ್ಣನ ಸೆಳೆಯುವ ಸುಕೋಮಲೆ ಇವಳು.

ಯಾರಿವಳು? ಯಾರಿವಳು? ಹುಣ್ಣಿಮೆ ಚಂದ್ರನ
ಕಾಂತಿಯ ಹೊಂದಿದ ರೂಪಸಿ ರಮಣಿ ಯಾರಿವಳು?

ಇಂದ್ರ ಧನಸ್ಸನು ನಾಚಿಸುವ ಕಂಗಳ ಒಡತಿ ಇವಳು
ಸುಂದರ ಜೇನೊಸರುವ ಕೆಂದುಟಿಯ ಜವ್ವನಿ ಇವಳು
ಬಯಕೆಯ ಅಲೆಗಳ ಹೋಡೆದೆಬ್ಬಿಸುವ ಸುಳಿಗಾಳಿ ಇವಳು
ವಾತ್ಸಾಯನನ ಕನಸಿನ ಚಿರಯೌವನೆ ಇವಳು.

ಯಾರಿವಳು? ಯಾರಿವಳು? ಜಗವನೆ ಮರೆತು
ಜಗವನೆ ಸೆಳೆಯುವ ಮೋಹಕ ಮಾಯೆ ಯಾರಿವಳು?

ಇಂದ್ರಲೋಕದ ಅಪರೂಪದ ಅಪ್ಸರೆ ಇವಳು
ಸುರಾಸುರರೂ ಬಯಸುವ ಗಂಧರ್ವಕನ್ಯೆ ಇವಳು
ಕಾಳಿದಾಸನ ಕಾವ್ಯ ಶಾಕುಂತಲೆ ಇವಳು
ಜಕಣನ ನಯನ ಮನೋಹರ ಶಿಲಾಬಾಲಿಕೆ ಇವಳು.

ಯಾರಿವಳು? ಯಾರಿವಳು? ಮುಗ್ಧತೆಯೇ ಮೂರ್ತಿ-
ವೆತ್ತಂತಿರುವ ಅಮೃತಮೂರ್ತಿ ಯಾರಿವಳು?

ಭುವಿಭಾರ ಹೊತ್ತಿರುವ ಭೂತಾಯಿಯ ಮಗಳಿವಳು
ಕಾರ್ಮೋಡದ ಅರಿವಿಲ್ಲದ ಸುಕುಮಾರಿ ಇವಳು
ಕ್ರೂರಮೃಗಗಳ ಅರಿವಿಲ್ಲದ ಮುಗ್ಧಳಿವಳು
ಬೇಡನ ಸುಳಿವರಿಯದ ಹಾರಾಡುವ ಹಕ್ಕಿ ಇವಳು.

ಹೂನಗೆ

ಅವಳ ಅರಳಿದ ತುಟಿಗಳ ನಡುವೆ ಮೂಡಿದ ಹೂನಗೆ
ಅವನ ಬರಡಾದ ಮನಸ್ಸಿಗೆ ತಂದಿತು ಸಂತಸದ ಹೂಮಳೆ.

ಮನ ಸೆಳೆಯಿತು ಆ ಮುಖದಿ ಮಾಸದ ಮುಗ್ಧತೆ
ಸುಂದರ ಸೌಮ್ಯ ಕಂಗಳು ಹೇಳಿತು ಪ್ರೇಮದ ಕವಿತೆ.

ಹರುಷ ತುಂಬಿದ ಮನದಲ್ಲಿ ಮೂಡಿತು ಅಧಮ್ಯ ಬಯಕೆ
ಅವಳ ಸವಿಜೇನಿನ ತುಟಿಗಳಿಗೆ ಕೊಡಲು ಸಿಹಿ ಕಾಣಿಕೆ.

ಸಿಹಿ ಹೆಚ್ಚಾಗಿ ಕೊಡಬೇಕಾಯಿತು ಪ್ರೇಮದ ಕಾಣಿಕೆ
ಮನ ಮರೆತ ಕಾರಣ ಕುತ್ತಿಗೆಗೆ ಬಿತ್ತು ಆಜೀವ ಕುಣಿಕೆ.

ಅವಳ ಅರಳಿದ ತುಟಿಗಳ ನಡುವೆ ಮೂಡಿದ ಹೂನಗೆ
ಅವರಿಬ್ಬರ ನೆಮ್ಮದಿಯ ಬಾಳಿಗೆ ಹಾಕಿತು ಬಿಡಿಸದ ಬೆಸುಗೆ.

ಬದುಕು

ಸಿಕ್ಕಿರುವೆ ನಾನು ಈ ಬದುಕಿನಾ ಸುಳಿಯಲ್ಲಿ
ಹಿಂದಿರುಗಿ ಹೋಗಲಾರೆ, ಮುಂದಡಿ ಇಡಲಾರೆ.
ಬಯಸಿದ್ದನ್ನು ಆಗಗೊಡದ ಈ ನನ್ನ ಬದುಕು
ಬೇಡದ್ದನ್ನು ಆಗಿಸುತ್ತಿದೆ ಪ್ರತಿದಿನವು.

ನಿರ್ಮಲವಾದ ಪ್ರೀತಿಯನ್ನು ಹುಡುಕಿ ಹೊರಟರೆ ನಾನು
ಮೂರ್ಖತೆಯ ತುತ್ತತುದಿಯನ್ನೇರುವೆನೇನೊ
ಬದುಕಿನ ನೆಮ್ಮದಿಯು ಎಲ್ಲೆಂದು ಹುಡುಕಹೊರಟರೆ ನಾನು
ಬಹುಶಃ ಕಾಣಸಿಗಬಹುದೇನೋ ಸಾವಿನ ಕರಿ ನೆರಳಿನಲ್ಲಿ.

ಸಾಧನೆಯ ಹಾದಿಯನು ಹುಡುಕುತಾ ಹೋದರೆ ನಾನು
ದಾರಿಯೇನೋ ಸಿಗುವುದು, ಆದರೆ ಒಂಟಿಯಾಗಿ ಸಾಗಲಾರೆನೇನೊ
ನಂಬುವುದು ಯಾರನ್ನು? ಪ್ರೀತಿಸುವುದು ಯಾರನ್ನು?
ಯಾರಿಗಾಗಿ ಬದುಕುವುದು ಎಂದು ಊಹಿಸಲಾರೆನು ನಾನು.

ಮನದ ಮೂಲೆಯಲ್ಲಿ ಏನೋ ನಿರೀಕ್ಷೆ, ಏನೋ ಕಾತರ
ಒಮ್ಮೆಯಾದರೂ ಕತ್ತಲು ಹೋಗಿ ಬೆಳಕು ಮೂಡಬಹುದೇನೋ ಎಂದು.
ಒಳ್ಳೆಯದರ ನಿರೀಕ್ಷೆಯಲ್ಲಿಯೇ ಮುಳುಗುವೆನು ಈ ಜೀವನ ಸುಳಿಯಲ್ಲಿ
ಮುಳುಗದೆ ದಡಸೇರಬಹುದೆಂಬ ನಿರೀಕ್ಷೆಯಲ್ಲಿ.

ಈ ಆಸೆಯೇ ಬದುಕುವುದಕ್ಕೆ ಮೂಲ
ಬದುಕಲಾಗದಿದ್ದರೂ ಬದುಕಿಸುವುದು ಈ ಆಸೆಯ ಸಣ್ಣ ಚಿಗುರು.
ಜೀವನವೆಲ್ಲಾ ಹುಡುಕಾಟವೇ, ಹೋರಾಟವೇ
ಏತಕ್ಕಾಗಿ ಎಂದು ಅರಿಯದ ಹುಡುಕಾಟ, ಹೋರಾಟ